ಬೆಳಗಾವಿ :

ಗೋಕಾಕ್ ಕ್ಷೇತ್ರದ ಪ್ರಭಾವಿ ಲಿಂಗಾಯತ ಮುಖಂಡ ಅಶೋಕ್ ಪೂಜಾರಿ ಕಾಂಗ್ರೆಸ್ ಸೇರ್ಪಡೆ, ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ ಸೋಲಿಸಲು ಡಿಕೆಶಿ ರಣತಂತ್ರ ಎಂಎಲ್‌ಸಿ ಗೆಲುವಿನ ಬಳಿಕ ಡಿಕೆಶಿಗೆ ವಿಧಾನಸಭೆ ಚುನಾವಣೆ ಟಾರ್ಗೆಟ್ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಪಕ್ಷ ಸೇರ್ಪಡೆ.

ಕಾಂಗ್ರೆಸ್ ಪಕ್ಷಕ್ಕೆ ಇನ್ನು ಹಲವು ನಾಯಕರ ಸೇರ್ಪಡೆಯಾಗಲಿದ್ದಾರೆ ಇನ್ನೂ ಲಿಸ್ಟ್ ಇದೆ ಲಿಸ್ಟ್ ಇಲ್ಲ ಅಂತಾ ಅನ್ನೋದಿಲ್ಲ. ನಮಗೆ ಬರೋ ಲಿಸ್ಟ್ ಎಲ್ಲ ಸ್ಕ್ರೀನಿಂಗ್ ಕಮೀಟ್‌ಗೆ ಕಳಿಸುತ್ತೇವೆ. ಯಾರ‌್ಯಾರು ಬರ್ತಾರೆ ಸಿಕ್ರೇನ್ಸಿ ಅನೌನ್ಸ್ ಮಾಡಬಾರದು ಸದ್ಯಕ್ಕೆ ಅಶೋಕ್ ಪೂಜಾರಿ ಪ್ರಬಲ ನಾಯಕರು, ಎಲ್ಲಾ ಪಕ್ಷದಿಂದ ನಿಂತಿದ್ದಾರೆ. ಅವರ ನಾಯಕತ್ವ ಕೆಲಸ ನೋಡಿ ಕಾಂಗ್ರೆಸ್ ಪಕ್ಷಕ್ಕೆ ಹೋಗುವಂತೆ ಅವರ ಬೆಂಬಲಿಗರ ಒತ್ತಾಯ ಮಾಡಿದ್ದಾರೆ. ನಮ್ಮ ಪಕ್ಷ ಕೂಡ ಉತ್ತಮವಾಗಿ ಬೆಳೆಯುತ್ತಿದೆ. ಮುಂದೆ ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಬೇಕೆಂದು ಗೋಕಾಕ್ ಜನತೆ ತೀರ್ಮಾನ ಮಾಡಿದ್ದಾರೆ. ಯಾವಾಗಲೂ ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರೇ ಆಯ್ಕೆ ಆಗ್ತಿದ್ರು, ಮುಂದೆಯೂ ಕೂಡ ಕಾಂಗ್ರೆಸ್ ಶಾಸಕರೇ ಆಯ್ಕೆ ಆಗ್ತಾರೆ ಎಂದು ಡಿ ಕೆ ಶಿವಕುಮಾರ ಹೇಳಿದರು.

ಮುಂಬರುವ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಶೋಕ್ ಪೂಜಾರಿ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಬೇಷರತ್ತಾಗಿ ಅಶೋಕ್ ಪೂಜಾರಿ ಸೇರ್ಪಡೆ ಮಾಡಿಕೊಂಡಿದ್ದೇವೆ. ನಾವು ಯಾರನ್ನೂ ಸೋಲಿಸೋದು ಅಲ್ಲ ನಮ್ಮ ಗುರಿ ಕಾಂಗ್ರೆಸ್ ಪಕ್ಷ ಗೆಲ್ಲಬೇಕು. ನಮ್ಮ ಗುರಿ 224 ಕ್ಷೇತ್ರದಲ್ಲಿ ಗೆಲ್ಲೋದು ಅಧಿವೇಶನ ಆದ ಮೇಲೆ ಯಾರು ಪಕ್ಷಕ್ಕೆ ಸೇರ್ಪಡೆ ಹೇಳ್ತೀನಿ ಎಂದು ಹೇಳಿದರು.