ಉ.ಕ ಸುದ್ದಿಜಾಲ ಗೋಕಾಕ :

ಡಿಸಿಸಿ ಬ್ಯಾಂಕ್ ಚುನಾವಣೆ ಹತ್ತಿರ ಬರ್ತಿದ್ದಂತೆ ಆಕ್ಟಿವ್ ಆದ ರಮೇಶ ಜಾರಕಿಹೊಳಿ. ಗೋಕಾಕನಲ್ಲಿ ಪಿಕೆಪಿಎಸ್ ಅಧ್ಯಕ್ಷ ಸದಸ್ಯರ ಸಭೆ ನಡೆಸಿದ ರಮೇಶ ಜಾರಕಿಹೊಳಿ. ಸಭೆಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಭಾಷಣ.

ಡಿಸಿಸಿ ಬ್ಯಾಂಕ್ ನಲ್ಲಿ ಜಾರಕಿಹೊಳಿ ಕುಟುಂಬದ 7 ಸದಸ್ಯರಿದ್ದರು ನಮಗೆ ಅನ್ಯಾಯ ಆಗಿದೆ. 24 ಸೊಸೈಟಿ ಅರಭಾವಿ ಭಾಗದಲ್ಲಿ ಬರುತ್ತೆ 36 ರಿಂದ 38 ಸೊಸೈಟಿಗಳು ನಮ್ಮ ಗೋಕಾಕ ಕ್ಚೇತ್ರದಲ್ಲಿ ಬರುತ್ತೆ.

ಗೋಕಾಕ ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್ ನಿಂದ ಕಡಿಮೆ ಸಾಲ ಪಡೆಯಲಾಗಿದೆ. ಕನಿಷ್ಠ ಈ ಬಾರಿ 1000 ಕೋಟಿ ಸಾಲ ಪಡೆಯಬೇಕು. ನಾನು ಶಾಸಕನಾಗಿ 26 ವರ್ಷ ಮುಗಿದು 27 ನೇ ವರ್ಷ ಪ್ರಾರಂಭ ಆಗುತ್ತೆ. ನನ್ನ ಶಾಸಕ ಅವಧಿಯಲ್ಲಿ ತುಪ್ಪದ್ ಹಾಗೂ ಅಶೋಕ್ ಪೂಜೇರಿ ಇದ್ದರು.

ಗಂಭೀರವಾಗಿ ನಿಮ್ಮಲ್ಲಿ ನಾನು ಕ್ಷಮೆ ಕೇಳುವೆ ಎಂದ ರಮೇಶ್.
ಡೈರೆಕ್ಟರ್ ನೇರವಾಗಿ ಕೊಟ್ಟಿದ್ದು ನನ್ನ ತಪ್ಪು ನಿರ್ಧಾರ. ಅದರಿಂದ ನನ್ನ ಕ್ಷೇತ್ರ ಬಹಳ ಹಿಂದೆ ಉಳಿಯಬೇಕಾಯ್ತು. ತಪ್ಪು ನಿರ್ಧಾರದಿಂದ ಕ್ಯಾಂಡಿಡೇಟ್ ಮುಂದುವರೆಸಿದೆ.

ಬರುವಂತ ಚುನಾವಣೆಯಲ್ಲಿ ನಾನು ಬಾಲಚಂದ್ರ ಸೇರಿ ಒಳ್ಳೆಯ ಡೈರೆಕ್ಟರ್ ಆಯ್ಕೆ ಮಾಡುತ್ತೆವೆ. 15 ವರ್ಷದಲ್ಲಿ ಆದ ಲೋಪ ನಾವು ಸರಿ ಮಾಡಿಕೊಳ್ಳುತ್ತೆವೆ. ಡಿಸಿಸಿ ಬ್ಯಾಂಕ್ ನಲ್ಲಿ ಸಾಲ ಪಡೆದರೆ ಬಹಲಷ್ಟು ರೈತರಿಗೆ ಲಾಭ ಇದೆ.

ಕೃಷಿ ವಲಯದಲ್ಲಿ ಮಹಾರಾಷ್ಟ್ರ ಗುಜರಾಜತ್ ಮಾದರಿಯಾಗಿವೆ. ಹೊಸ ಕೃಷಿ ಪದ್ಧತಿಯ ಪ್ರಕಾರ ನಾವು ಕೆಲಸ ಮಾಡಬೇಕಿದೆ. ಹಿಂದೆ 30-40 ಟನ್ ಕಬ್ಬು ಬರುತ್ತಿತ್ತು. ಈಗ ಹೆಚ್ಚಿನ ‌ಇಳುವರಿ ಪಡೆಯಲು ಅವಕಾಶಗಳಿವೆ.

ನಮ್ಮ ರೈತರು ನೂರಕ್ಕೆ ಎಪ್ಪತ್ತರಷ್ಟು ಕಬ್ಬು ಬೆಳೆಯುತ್ತಾರೆ. ಇಪ್ಪತ್ತು ವರ್ಷದ ಹಿಂದೆ ಕಬ್ಬು ಕಳಿಸೋದೆ ದೊಡ್ಡ ಸಾಹಸದ ಕೆಲಸ ಆಗಿತ್ತು. ಕಬ್ಬು ಕಳಿಸಲು ಪರ್ಮಿಟ್ ಸಿಕ್ಕರೆ ಪಾರ್ಟಿ ಮಾಡ್ಕೊಂಡು ಬರುತ್ತಿದ್ದರು. ಪರ್ಮಿಟ್ ಸಿಕ್ಕರೆ ಎಂಎಲ್ಎ ಟಿಕೇಟ್ ಸಿಕ್ಕಷ್ಟೆ ಖುಷಿ ಪಡ್ತಿದ್ದರು.

ಪ್ರತಿ ಪಿಕೆಪಿಎಸ್ ಗೆ ಒಂದು ಕಬ್ಬು ಕಟಾವು ಮಾಡುವ ಯಂತ್ರ ಕೊಡಿಸುತ್ತೆನೆ. ಸರ್ಕಾರದಿಂದ ದೊಡ್ಡ ಸೊಸೈಸಿಟಿಗೆ ಎರಡು ಸಣ್ಣ ಸೊಸೈಟಿಗೆ ಒಂದು ಕಬ್ಬು ಕಟಾವು ಮಾಡುವ ಯಂತ್ರ ಕೊಡಿಸುತ್ತೆನೆ. ಡಿಸಿಸಿ ಬ್ಯಾಂಕ್ ನಲ್ಲಿ ಬಡ್ಡಿ ಬಹಳ ಕಡಿಮೆ ಇದೆ ಅದನ್ನು ರೈತರು ಉಪಯೋಗ ಮಾಡಿಕೊಳ್ಳಬೇಕು ಎಂದ ರಮೇಶ ಜಾರಕಿಹೋಳಿ