ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ ಮಹತ್ತರ ಬೆಳವಣಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ ರಮೇಶ ಕತ್ತಿ ರಾಜೀನಾಮೆ ಬ್ಯಾಂಕನ ಜನರಲ್ ಮ್ಯಾನೇಜರ್ ಗೆ ರಾಜೀನಾಮೆ ಪತ್ರ ಸಲ್ಲಿಕೆ.

ಅಧ್ಯಕ್ಷ ರಮೇಶ ಕತ್ತಿ ವಿರುದ್ಧ ಸಿಡಿದೆದ್ದ 14ಜನ ನಿರ್ದೇಶಕರು ನಿನ್ನೆ ರಮೇಶ ಕತ್ತಿ ಕರೆದ ಸಭೆಗೆ ಗೈರಾಗಿ ಪ್ರತ್ಯೇಕ ಸಭೆ ನಡೆಸಿದ್ದ ನಿರ್ದೇಶಕರು ರಮೇಶ ಕತ್ತಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದ ನಿರ್ದೇಶಕರು ಅವಿಶ್ವಾಸ ನಿರ್ಣಯದಿಂದ ಎಚ್ಚೆತ್ತು ಸ್ವಯಂ ರಾಜೀನಾಮೆ ಪತ್ರ ಸಲ್ಲಿಕೆ.
ಡಿಸಿಸಿ ಬ್ಯಾಂಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಬಾಲಚಂದ್ರ ಜಾರಕಿಹೋಳಿ ಪತ್ರಿಕಾಗೋಷ್ಠಿ :
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ತಾನಕ್ಕೆ ರಮೇಶ ಕತ್ತಿ ರಾಜೀನಾಮೆ ಹಿನ್ನೆಲೆ ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ ಬಾಲಚಂದ್ರ ಜಾರಕಿಹೊಳಿ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ರಾಜೀನಾಮೆ ಕೊಟ್ಟರು. ಟಿವಿಗಳಲ್ಲಿ ವಿಷಯ ಬೇರೆ ಬೇರೆ ಬರುತ್ತಿದೆ ಎಲ್ಲರಿಗೂ ಕ್ಲೀಯರ್ ಮಾಡ್ತಿವಿ.
ಎಲ್ಲರ ಸಹಮತದಿಂದ 2020 ರಲ್ಲಿ ಅವಿರೋಧ ಆಯ್ಕೆ ಮಾಡಿದ್ವಿ. ಇನ್ನೊಂದು ವರ್ಷ ಅವಧಿ ಇತ್ತು ಸ್ವಲ್ಪ ಬಿನ್ನಾಭಿಪ್ರಾಯ ಇದ್ದವು. ಡೈರೆಕ್ಟರ್ಸ್ ಎಲ್ಲರೂ ಬಂದು ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಮನವಿ ಮಾಡಿದರು. ಅವರಿಗೆ ನಾವೂ ಸಜ ಮನವಿ ಮಾಡಿದೆವು. ಹೀಗಾಗಿ ಹಿರಿಯರು ಹಾಗೂ ನಿರ್ದೇಶಕರ ಗೌರವ ಕೊಟ್ಟು ರಾಜೀನಾಮೆ ನೀಡಿದ್ದಾರೆ.
ಅಕ್ಟೋಬರ್ ಅಂತ್ಯದ ಒಳಗೆ ಹೊಸ ಅಧ್ಯಕ್ಷರ ಆಯ್ಕೆ ಆಗುತ್ತೆ. ಜಿಲ್ಲೆಯ ಹಿರಿಯ ಪ್ರಭಾಕರ ಕೋರೆ,ಸವದಿ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಅಧ್ಯಕ್ಷರ ಆಯ್ಕೆ ಆಗುತ್ತೆ. ರಮೇಶ ಅವರ ನೇತೃತ್ವದಲ್ಲಿ 30 ಕೋಟಿ ಲಾಭ ಆಗಿದೆ. ಹಿರಿಯರ ವಿನಂತಿಯ ಮೇರೆಗೆ ರಮೇಶ ಸ್ವ ಇಷ್ಛೆಯಿಂದ ರಾಜೀನಾಮೆ ನೀಡಿದ್ದಾರೆ.
ಬ್ಯಾಂಕ್, ರೈತರು, ಗ್ರಾಹಕರ ಹಿತ ದೃಷ್ಟಿಯಿಂದ ಹೊಸ ಅಧ್ಯಕ್ಷರ ಆಯ್ಕೆ ಮಾಡ್ತಿವಿ. ರಮೇಶ ಕತ್ತಿಯವರು ಯಾಕೆ ಬಂದಿಲ್ಲ ಎಂಬ ಪ್ರಶ್ನೆ ವಿಚಾರ. ಹೊಸ ಅಧ್ಯಕ್ಷನ ಆಯ್ಕೆಯಲ್ಲಿ ಅವರು ಇರ್ತಾರೆ.
ರಮೇಶ ಕತ್ತಿ ವಿರುದ್ಧ ಅಸಮಾಧಾನ ವ್ಯಕ್ತವಾಯ್ತು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಮೆಂಬರ್ಶಿಪ್ ಮಾಡುವ ವಿಚಾರದಲ್ಲಿ ನಾವೆಲ್ಲರೂ ಸೇರಿದ್ವಿ. ಅದಕ್ಕೂ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ.
ಎಲ್ಲರೂ ಸೇರಿ ಒಂದು ಸಂಸ್ಥೆ ನಡೆಸುವಾಗ ಭಿನ್ನಾಭಿಪ್ರಾಯ ಇರುತ್ತೆ. ಬ್ಯಾಂಕ್ ಸರಿ ನಡೆಸಿಲ್ಲ ಎನ್ನುವ ಕಾರಣಕ್ಕೆ ಅವರನ್ನ ಬದಲಾವಣೆ ಮಾಡಿಲ್ಲ. ಅವರು 9 ವರ್ಷ ಅವರು ಬ್ಯಾಂಕ್ ಅಧ್ಯಕ್ಷರಾಗಿ ಇದ್ದರು. ಭಿನ್ನಾಭಿಪ್ರಾಯ ಇದ್ದೆ ಇರುತ್ತೆ ಅದೇ ಕಾರಣಕ್ಕೆ ಅವರು ರಾಜೀನಾಮೆ ಕೊಟ್ಟಿದ್ದಾರೆ ಎನ್ನುವುದು ಸುಳ್ಳು.
ಹೊಸ ಅಧ್ಯಕ್ಷರು ಒಂದು ವರ್ಷದಲ್ಲಿ ಎನು ಸಾಧನೆ ಮಾಡ್ತಾರೆ ಎಂಬ ಪ್ರಶ್ನೆಗೆ ಉತ್ತರಿಸೊದ ಬಾಲಚಂದ್ರ ಜಾರಕಿಹೋಳಿ ಎನು ಬೇಕಾದರೂ ಮಾಡಬಹುದು 6 ತಿಂಗಳಲ್ಲಿ ಎನು ಬೇಕಾದರೂ ಸಾಧನೆ ಮಾಡಬಹುದು. 50 ಕೋಟಿ ಲಾಭ ಮಾಡಲು ನಾವು ಪ್ರಯತ್ನ ಮಾಡ್ತಿವಿ.
ನಿಪ್ಪಾಣಿ ಕ್ಷೇತ್ರದಲ್ಲಿ ಮೆಂಬರ್ಶಿಪ್ ಮಾಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಇತ್ತಾ ಎಂಬ ವಿಚಾರ. ಅದನ್ನ ನಿನ್ನೆಯೂ ಸಹ ಮಾತನಾಡುವಾಗ ನಾನು ಹೇಳಿದ್ದೆ ಭಿನ್ನಾಭಿಪ್ರಾಯ ಇತ್ತು.
ನಾನು ಅಧ್ಯಕ್ಷ ಸ್ಥಾನದಿಂದ ಇಳಿದರೆ 400 ಕೋಟಿ ಲಾಸ್ ಆಗುತ್ತೆ ಎಂಬ ರಮೇಶ ಕತ್ತಿ ಹೇಳಿಕೆ ವಿಚಾರ. ಯಾವುದು ಹಾಗೆ ಯಾವುದು ಆಗುದಿಲ್ಲ. ಇನ್ನು ಹೆಚ್ಚಿನ ಠೇವಣಿಯನ್ನು ನಾವು ಸಂಗ್ರಹ ಮಾಡ್ತಿವಿ ಎಂದ ಬಾಲಚಂದ್ರ ಜಾರಕಿಹೊಳಿ.
ರಮೇಶ ಕತ್ತಿ ನಿರ್ದೇಶಕರನ್ನು ವಿಶ್ವಸಕ್ಕೆ ತೆಗೆದುಕೊಂಡಿಲ್ಲ ಎಂಬ ಪ್ರಶ್ನೆ. 10 ಕೆಲಸ ಹೇಳಿದಾಗ 10 ಕೆಲಸ ಮಾಡೋಕೆ ಆಗಲ್ಲ. ಮಾಧ್ಯಮಗಲ್ಲಿ ಬೇರೆ ಬೇರೆ ರೀತಿಯ ಸುದ್ದಿ ಬರ್ತಿರೋದಕ್ಕೆ ಅವರು ಬೇಜಾರಾಗಿದ್ದಾರೆ.
ಏಕಾಏಕಿ ಅಧ್ಯಕ್ಷರ ಬದಲಾವಣೆ ಆಗ್ತಿರೋದು ಜನರ ಮೇಲೆ ಪ್ರಭಾವ ಬಿರುತ್ತೆ ಎಂಬ ವಿಚಾರ. ಯಾವುದೇ ಪ್ರಭಾವ ಬೀರಲ್ಲ ಎಲ್ಲವೂ ಸುಸೂತ್ರವಾಗಿ ನಡೆಯುತ್ತೆ. ಹೆಚ್ಚು ಡಿಪಾಸಿಟ್ ಮಾಡ್ತಿವಿ, ಸಾಲವನ್ನೂ ಸಹ ಹೆಚ್ಚು ಕೊಡ್ತಿವಿ.
ಅನೇಕ ಸಕ್ಕರೆ ಕಾರ್ಖಾನೆಗಳು ಡಿಸಿಸಿ ಬ್ಯಾಂಕ್ ನಿಂದ ಸಾಕ ಕೊಟ್ಟು ರಿಕವರಿ ಮಾಡದ ವಿಚಾರ. ಎಲ್ಲವೂ ಸಹ ರಿಕವರಿ ಪ್ರಾರಂಭ ಆಗಿದೆ. ಆಡಿಟ್ ನಲ್ಲಿ ಎಲ್ಲವೂ ಬರುತ್ತೆ.ಬಾಲಚಂದ್ರ ಜಾರಕಿಹೊಳಿ ಹಾಗೂ ಜಾರಕಿಹೊಳಿ ಕುಟುಂಬದವರು ಯಾರೂ ಅಧ್ಯಕ್ಷರಾಗೋದಿಲ್ಲ ಎಂದ ಬಾಲಚಂದ್ರ ಜಾರಕಿಹೊಳಿ.