ಉ.ಕ ಸುದ್ದಿಜಾಲ ನಿಪ್ಪಾಣಿ :
ನಿಪ್ಪಾಣಿ ಪಟ್ಟಣದಲ್ಲಿ ಸಚಿವ ಸತೀಶ ಜಾರಕಿಹೊಳಿ ಖರ್ಗೆ ಭೇಟಿ ಕುರಿತು ಹೇಳಿಕೆ ಖರ್ಗೆ ಅವರ ನಮ್ಮ ವರಿಷ್ಠರು ದೆಹಲಿಗೆ ಹೋದಾಗ ಭೇಟಿ ಆಗಲೇಬೇಕು ಖರ್ಗೆ ಅವರೊಂದಿಗೆ ಸಹಜ ಭೇಟಿ ರಾಜ್ಯದಲ್ಲಿ ಹೊಸ ಸಂಚಲನ ಲಕ್ಷಣ ಹಾಗೂ ಬೆಳವಣಿಗೆಗಳು ಕಾಣುತ್ತಿಲ್ಲ ಎಂದು ಬೆಲಕಗಾವಿ ಉಸ್ತುವಾರಿ ಬಸಚಿವ ಸತೀಶ ಜಾರಕಿಹೋಳಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಗಟವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು ಸಿಎಂ ಮೇಲೆ ರಾಜೀನಾಮೆ ಒತ್ತಡ ವಿಚಾರ ನಮ್ಮ ಪಕ್ಷದಿಂದ ಸಿಎಂ ಮೇಲೆ ಯಾವುದೇ ಒತ್ತಡವಿಲ್ಲ. ಎರಡು ತಿಂಗಳಿನಿಂದ ವಿರೋಧ ಪಕ್ಷಗಳು ಮಾತ್ರ ಒತ್ತಡ ಹಾಕುತ್ತಿವೆ.
ಕಾನೂನು ರೀತಿಯಾಗಿ ಹೋರಾಟ ಮಾಡಲು ತೀರ್ಮಾನ ಮಾಡಿದ್ದೇವೆ ಇಡಿ ಪ್ರಕರಣ ದಾಖಲಿಸಿ ತನಿಖೆ ಮಾಡಲಿ ಏನೂ ತೊಂದರೆಯಿಲ್ಲ. ಇಡಿ ತನಿಖೆಯಿಂದ ಸತ್ಯಾಂಶ ಹೊರ ಬರುತ್ತದೆ.
ಬೆಳಗಾವಿ ಸಚಿವರಿಂದ ಪಿ ರಾಜೀವ ಭೂ ಕಬಳಿಕೆ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯಾರೂ ಏನೂ ಎಲ್ಲಿ ಅಂತಾ ಪೂರ್ಣ ಹೇಳಬೇಕು. ಇನ್ನೂ ಅದು ಅರ್ಧ ಇದೆ ಪೂರ್ಣವಾದಾಗ ಪ್ರತಿಕ್ರಿಯೆ ನೀಡುತ್ತೇನೆ.
ರಾಜ್ಯದಲ್ಲಿ ದಲಿತ ಸಿಎಂ ಕೂಗು ಎದ್ದಿಲ್ಲ ಖರ್ಗೆ ಅವರ ಜೊತೆಗೆ ಮುಡಾ ಹಗರಣ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ರಾಜಕೀಯ ನಮ್ಮ ಸಮಸ್ಯೆಗಳನ್ನು ಮಾತ್ರ ಚರ್ಚೆ ಮಾಡಿದ್ದೇವೆ.
ನಾನು ಸಿಎಂ ಎನ್ನುವದನ್ನ ಅಭಿಮಾನಿಗಳು ಅಭಿಯಾನ ಮಾಡುತ್ತಿದ್ದಾರೆ. ಅಭಿಯಾನ ಮಾಡಲು ದುಡ್ಡು ಬೇಕಾಗಿಲ್ಲ ಫ್ರೀ ಆಗಿ ಮಾಡುವರು ಮಾಡುತ್ತಾರೆ ಅದಕ್ಕೂ ಖರ್ಗೆ ಭೇಟಿಗೂ ಸಂಬಂಧವಿಲ್ಲ ಎಂದರು.