ಉ.ಕ ಸುದ್ದಿಜಾಲ ಬೆಳಗಾವಿ :

ಜೈ ಮಹಾರಾಷ್ಟ್ರ ಘೋಷಣೆಗೆ ವಿರೋಧಿಸಿದ್ದ ಉದ್ಯಮಿ ಭಾವಚಿತ್ರಕ್ಕೆ ಕಪ್ಪುಮಸಿ ಉದ್ಯಮಿ ಶ್ರೀಕಾಂತ್ ದೇಸಾಯಿ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿದ ಎಂಇಎಸ್ ಪುಂಡರು!

ಕರ್ನಾಟಕದ ಗಡಿಯಲ್ಲಿರುವ ಚಂದಗಡ ತಾಲೂಕಿನ ಶಿನ್ನೋಳ್ಳಿ ಗ್ರಾಮದಲ್ಲಿ ಘಟನೆ. ಶ್ರೀಕಾಂತ್ ದೇಸಾಯಿ ಭಾವಚಿತ್ರವಿರುವ ಜಾಹಿರಾತು ಫಲಕಕ್ಕೆ ಮಸಿ ಬಳಿದ ಪುಂಡರು ಉದ್ಧಟತನ.
ಉದ್ಯಮಿ ಶ್ರೀಕಾಂತ್ ದೇಸಾಯಿ ನಿವಾಸದ ಗೋಡೆ ಮೇಲೂ “ಜೈ ಮಹಾರಾಷ್ಟ್ರ” ಎಂದು ಬರೆದ ಎಂಇಎಸ್ ಪುಂಡರು.

ಎಂಇಎಸ್ ಮುಖಂಡ ಶುಭಂ ಶಳಕೆ ನೇತೃತ್ವದಲ್ಲಿ ಉದ್ಯಮಿ ಭಾವಚಿತ್ರಕ್ಕೆ ಕಪ್ಪುಮಸಿ. ಬೆಳಗಾವಿ ಆನಂದವಾಡಿಯಲ್ಲಿ ಈಚೆಗೆ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಪಂದ್ಯಾವಳಿ ಉದ್ಘಾಟನೆ ವೇಳೆ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ್ದ ನೇಪಾಳದ ಕುಸ್ತಿಪಟು.

ಆಗ ಕುಸ್ತಿಪಟುವಿನಿಂದ ಮೈಕ್ ಕಸಿದುಕೊಂಡು ಕುಸ್ತಿಪಟುವಿಗೆ ತಿಳಿಹೇಳಿದ್ದ ಉದ್ಯಮಿ ಶ್ರೀಕಾಂತ್ ದೇಸಾಯಿ. ಏ ಕುಸ್ತಿಪಟು ಜೈ ಮಹಾರಾಷ್ಟ್ರ ಎಂದು ವಿವಾದಾತ್ಮಕ ಘೋಷಣೆ ಕೂಗಬೇಡ ಎಂದಿದ್ದ ಉದ್ಯಮಿ ಶ್ರೀಕಾಂತ ದೇಸಾಯಿ.

ಇಷ್ಟಕ್ಕೆ ಬುಡಕ್ಕೆ ಉರಿಬಿದ್ದಂತೆ ಆಡ್ತಿರುವ ನಾಡದ್ರೋಹಿಗಳು. ಉದ್ಯಮಿ ಶ್ರೀಕಾಂತ್ ದೇಸಾಯಿ ಜಾಹಿರಾತು ನಾಮಫಲಕದಲ್ಲಿರುವ ಭಾವಚಿತ್ರಕ್ಕೂ ಕಪ್ಪು ಮಸಿ ಬಳಿದು ಪುಂಡಾಟಿಕೆ ಮೆರದಿದ್ದಾರೆ.