ಉ.ಕ‌ ಸುದ್ದಿಜಾಲ ಚಿಕ್ಕೋಡಿ :

ಸಿಎಂ ಸಿದ್ದರಾಮಯ್ಯರ ರಾಜೀನಾಮೆಗೆ ಆಗ್ರಹಿಸಿದ ಪಿ.‌ರಾಜೀವ್

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಸಿಎಂ ಸಿದ್ದರಾಮಯ್ಯರ ರಾಜೀನಾಮೆಗೆ ಆಗ್ರಹಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ‌್ಯದರ್ಶಿ ಪಿ. ರಾಜೀವ್.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪಿ.ರಾಜೀವ ಆರೋಪ ಸ್ಥಾನದಲ್ಲಿ ಯಾರೇ ಇದ್ದರೂ ಸಹ ರಾಜೀನಾಮೆ ನೀಡಲೇಬೇಕು. ಜನಪ್ರತಿನಿಧಿಗಳ‌ ನ್ಯಾಯಾಲಯದಿಂದ ತೀರ್ಪು ಬಂದಿದೆ.

ಸಿದ್ದರಾಮಯ್ಯಗೆ ಮೊದಲು ರಾಜೀನಾಮೆ ನೀಡಿ ತನಿಖೆ ಎದುರಿಸಲಿ‌. ಕ್ಯಾಬಿನೆಟ್ ವತಿಯಿಂದ ಸಿಬಿಐ ಅನುಮತಿ ಕೊಡಲ್ಲ ಅಂತ ಹೇಳುತ್ತಾರೆ. ಅಧಿಕಾರಿದಲ್ಲಿದ್ದುಕೊಂಡು ತನಿಖೆ ಎದುರಿಸುವುದು ಕಾನೂನು ಬಾಹಿರ.

ಆರೋಪ ಮುಕ್ತರಾದ ಬಳಿಕ ನೀವು ಮತ್ತೆ ಸಿಎಂ ಸ್ಥಾನ ಅಲಂಕರಿಸಿ. ಅದರಲ್ಲಿ ನಮ್ಮದೇನು ತಕರಾರು ಇಲ್ಲವೆಂದ ಪಿ.ರಾಜೀವ್.