ಹಾಸನ :

ಹಾಸನಾಂಬೆ ದೇವಾಲಯದ ಹುಂಡಿಯಲ್ಲಿ ತಮ್ಮ‌ ನೋವು, ಸಮಸ್ಯೆಗಳನ್ನು ಬಗೆಹರಿಸು ತಾಯಿ ಎಂದು ಕಾಗದದಲ್ಲಿ ಬರೆದು ಹುಂಡಿಯಲ್ಲಿ ಹಾಕಿರುವ ಭಕ್ತರು‌.

ಶಾಸಕರನ್ನು ಬದಲಾಗುವಂತೆ ಮಾಡು ತಾಯಿ ಎಂದು ಕಾಗದದಲ್ಲಿ ಬರೆದು ಹಾಕಿರುವ ಭಕ್ತರು. ನಿನ್ನ ಕೃಪೆಯಿಂದ ‌ಹೊಳೆನರಸೀಪುದ ಎಂ.ಎಲ್.ಎ. ಬದಲಾಗಬೇಕು. ಜನರನ್ನು ಕಷ್ಟದಿಂದ ಪಾರುಮಾಡು. H.D.ರೇವಣ್ಣ ಕುಟುಂಬ ಸದಸ್ಯರು ಜನರ ಪ್ರಾಣ ಹಿಂಡುತ್ತಿದ್ದಾರೆ. ಅವರ ಕುಟುಂಬದವರನ್ನೆಲ್ಲಾ ಸೋಲಿಸಿ ಬಿಡು ತಾಯಿ ಅವರು ಮುಂದೆ ಯಾರನ್ನು ಬರಲು ಬಿಡುತ್ತಿಲ್ಲ. ಹೊಳೆನರಸೀಪುರ ಜನತೆಗೆ ಒಳ್ಳೆಯದು ಮಾಡು ತಾಯಿ ಎಂದು ಬರೆದು ಹುಂಡಿಯಲ್ಲಿ‌‌ ಹಾಕಿರುವ ಭಕ್ತ.

ಇನ್ನೂ ಹಲವು ಪತ್ರಗಳು ಹುಂಡಿ ಎಣಿಸುವಾಗ ಪತ್ತೆ.ನನ್ನ ದೊಡ್ಡಮಗನಿಗೆ ಮದುವೆ‌‌ ಮಾಡು. ಒಂದು ವರ್ಷದೊಳಗೆ ಮನೆ ಕಟ್ಟಿದರೆ 301 ಕಾಣಿಕೆ ಹಾಕುತ್ತೇನೆ. ಕೊರೊನ ತೊಲಗಿಸಿ ಎಲ್ಲರಿಗೂ ‌ಒಳ್ಳೆಯ ಆರೋಗ್ಯ ಕೊಡು‌ ತಾಯಿ ಬೇಗ ಪ್ರಮೋಷನ್ ಕೊಡಮ್ಮ. ಒಂದು ವರ್ಷದೊಳಗೆ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಿಸು. ಹಲವು ಬೇಡಿಕೆಗಳನ್ನು ಈಡೇರಿಸು ಹಾಸನಾಂಬೆ ತಾಯಿಯೆಂದು ಹಲವು ಪತ್ರಗಳನ್ನು ಹುಂಡಿಯಲ್ಲಿ ಹಾಕಿರುವ ಭಕ್ತರು.