ಉತ್ತರ ಕರ್ನಾಟಕ ಸುದ್ದಿಜಾಲ ಧಾರವಾಡ :

ರಾಜಕಾರಣಕ್ಕಾಗಿ ಪಾದಯಾತ್ರೆ, ಹೋರಾಟ ಮಾಡೊರು ಮೊಸರಲ್ಲಿ‌ ಕಲ್ಲು ಹುಡುಕುವ ಕೆಲಸ ಮಾಡ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಧಾರವಾಡದಲ್ಲಿ ಹೇಳಿಕೆ ನೀಡಿದರು.

ನಮ್ಮ ಸರ್ಕಾರ ಮೇಕೆದಾಟು ಬಗ್ಗೆ ಬದ್ಧತೆ ಇದೆ ಅದಕ್ಕಾಗಿ ಕೆಲಸ ಮಾಡುತಿದ್ದೇವೆ. ಅದನ್ನ ಅರ್ಥ ಮಾಡಿಕೊಂಡು ಅವರು ಪಾದಯಾತ್ರೆ ಮಾಡಬೇಕು. ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಅವರಿಂದ ಏನು ಪಾಠ ಕಲಿಯುವ ಅವಶ್ಯಕತೆ‌ ಇಲ್ಲಾ.‌ ಸಿದ್ಧರಾಮಯ್ಯನವರು ಕೇಳಿದಕ್ಕೆಲ್ಲಾ ನಾನು ಉತ್ತರ ಕೊಡಲ್ಲ ಎಂದು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ