ಉ.ಕ ಸುದ್ದಿಜಾಲ ಕಾಗವಾಡ :

ಯಶಸ್ವಿ ಜೀವನಕ್ಕೆ ಶಿಕ್ಷಣದ ಪಾತ್ರ ಬಹುಮುಖ್ಯವಾದದ್ದು ಅದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಕೂಡಾ ಶಿಕ್ಷಣ ಪಡೆಯುವುದು ಬಹಳ ಮುಖ್ಯವಾಗಿದೆ. ಶಿಕ್ಷಣ ಜೀವನದ ಮೌಲ್ಯ ಜೀವನದ ವ್ಯೆವಸ್ಥೆಯನ್ನ ಗುರುತಿಸುತ್ತದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರಬಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೂಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದ ಉದ್ದೇಶಿಸಿ ಮಾತನಾಡಿದ ಅವರು ನಾವು ಕಲಿಯುವ ವೇಳೆಯಲ್ಲಿ ಇದ್ದ ಶಿಕ್ಷಕರು ಈಗಿಲ್ಲ. ಈಗ ಸಂಬಳ ತೊಗೊತ್ತಿದ್ದೀವಿ ಅಂತಾ ಪಾಠಾ ಮಾಡೊ ಶಿಕ್ಷಕರಿದ್ದಾರೆ ಹೊರೆತು ಮಕ್ಕಳಿಗೆ ಬುದ್ದಿ ಹೇಳುವ ಶಿಕ್ಷಕರು ಕಡಿಮೆ. ಈಗಿನ ಪಾಲಕರು ಕೂಡಾ ಹಾಗೆ ಇದ್ದಾರೆ ಮಕ್ಕಳಿಗೆ ಹೊಡೆಯ ಬೇಡಿ‌ ಅನ್ನುವ ಪಾಲಕರು ಇರುವ ವರೆಗೂ ಶಿಕ್ಷಣ ಸುಧಾರಿಸುವುದಿಲ್ಲ ಎಂದರು.

ವಿದ್ಯಾರ್ಥಿಗಳು ಬಹು ಮುಖ್ಯವಾಗಿ ಕಲಯಬೇಕಾದದ್ದು ಸಂಸ್ಕೃತಿ. ವಿದ್ಯಾರ್ಥಿ ಎಷ್ಟೇ ದೊಡ್ಡ ಹುದ್ದೆಗೆ ಹೋದರು ಕಲಿಸಿದ ಶಿಕ್ಷಕರಿಗೆ ವಿದ್ಯಾರ್ಥಿ ಗೌರವ ಕೊಡಲೇಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇರುವ ಟ್ಯಾಲೆಂಟ ಪಟ್ಟಣದಲ್ಲಿ ಕಲಿತಿರುವ ವಿದ್ಯಾರ್ಥಿಗಳಿಗೆ ಇಲ್ಲ. ಹೊರ ದೇಶಗಳಲ್ಲಿ ಸದ್ಯ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಇರುವ ಬುದ್ದಿವಂತಿಕೆ ಹೊರ ದೇಶದ ವಿದ್ಯಾರ್ಥಿಗಳಿಗೆ ಇಲ್ಲ ಎಂದರು‌.

ಅಮೇರಿಕಾದಲ್ಲಿ ಅಕ್ಕ ಸಮ್ಮೇಳನ‌ ಮಾಡುತ್ತಾರೆ ಅಮೇರಿಕಾದಲ್ಲೂ ಕೂಡಾ ಕನ್ನಡಿಗರಿದ್ದಾರೆ ಈ ಕಾರ್ಯಕ್ರಮದಲ್ಲಿ ನಾನೂ ಕೂಡಾ ಭಾಗಿಯಾಗಿದ್ದೇನೆ 20 ಸಾವಿರ ಕನ್ನಡ ಹುಡುಗರು ಕೂಡಿ ಅಕ್ಕ ಸಮ್ಮೇಳನ ಕೆಲಸ ಮಾಡುತ್ತಾರೆ ಪ್ರತಿ ಮೂರು ವರ್ಷಕ್ಕೊಮ್ಮೆ ಕಾರ್ಯಕ್ರಮ ಮಾಡುತ್ತಾರೆ. ಅಕ್ಕ ಸಮ್ಮೇಳನದಲ್ಲಿ ಭಾಗಿಯಾಗಿರುವ ಬಗ್ಗೆ ವಿದ್ಯಾರ್ಥಿಗಳ ಜೊತೆ ತಮ್ಮ ಅನುಭವವನ್ನ ಹಂಚಿಕೊಂಡ ಕಾಗವಾಡ ಶಾಸಕ ರಾಜು ಕಾಗೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಿಜಿಸ್ಟರ್ ಡಿ ಕೆ ಕಾಂಬಳೆ ಮಾತನಾಡಿ ಸಾಧಿಸುವ ಛಲವೊಂದಿದ್ದರೆ ಎಷ್ಟೇ ಕಷ್ಟ ಬಂದರು ಆ ವ್ಯಕ್ತಿ‌ಸಾಧಿಸಿ ತೋರಿಸುತ್ತಾನೆ. ವಿದ್ಯಾರ್ಥಿ ತನ್ನ ಜೀವನದಲ್ಲಿ ಕಷ್ಟಗಳನ್ನು ಇಷ್ಟ ಪಟ್ಟ ಎದುರಿಸಬೇಕು ಆಗ ಮಾತ್ರ ಯಶಸ್ಸು ದೊರೆಯಲು ಸಾಧ್ಯ. ಒಬ್ಬ ವಿದ್ಯಾರ್ಥಿ ಬಡತನ ಎದುರಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಿಜಿಸ್ಟರ ಹುದ್ದೆಗೆ ಬಂದಿದ್ದೇನೆ ಎಂದರೆ ಅದಕ್ಕೆ ಮೂಲ‌ ಕಾರಣ ಶಿಕ್ಷಣ. ಎಲ್ಲರೂ ತೆಲೆ ಬಾಗೊದು ಶಿಕ್ಷಣಕ್ಕೆ ಎಂದು ತಾವು ಬಂದ ದಾರಿಯನ್ನ ನೆನೆದ ಆರ್‌ಸಿಯು ರಿಜಿಸ್ಟರ ಡಿ ಕೆ ಕಾಂಬಳೆ.

ಕೃಷ್ಣಾ ಕಿತ್ತೂರ ಮಠದ ಬಸವೇಶ್ವರ ಸ್ವಾಮೀಜಿಗಳು ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದರು, ಒಬ್ಬ ವ್ಯಕ್ತಿ ತಾನು‌ ಪಡೆದ ಅಂಕದಿಂದ ಪ್ರತಿಷ್ಟ ಬರುವುದಿಲ್ಲ ಅವನು ಮಾಡುವ ಕಾಯಕದಿಂದ ಆತನ ಪ್ರತಿಷ್ಟ ಗೊತ್ತಾಗುತ್ತೆ ಯಾವುದೇ ಒಬ್ಬ ವ್ಯಕ್ತಿ ಯಾವುದೇ ಕಾಯಕ‌ ಮಾಡಲಿ ಆ ಕಾಯಕದ ಮೇಲೆ ಭಕ್ತಿ‌ ಹಾಗೂ ಶ್ರದ್ದೆ ಇರಬೇಕು ಆಗ ಮಾತ್ರ ಒಬ್ಬ ವ್ಯಕ್ತಿ ಮುಂದೆ ಬರಲು‌ ಸಾಧ್ಯ. ನಮ್ಮ ಕನ್ನಡ ಭಾಷೆಗೂ ಕೂಡಾ ಅಷ್ಟೆ ಗೌರವವಿದೆ. ಹೀಗಾಗಿಯೇ ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಎಂದು ವಿದ್ಯಾರ್ಥಿಗಳನ್ನ ಉದ್ದೇಶಿಸಿ ಶ್ರೀಗಳು ಮಾತನಾಡಿದರು.