ಕಾಗವಾಡ (ಮೋಳೆ) :

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಶ್ರೀ ಸಿದ್ದೇಶ್ವರ ದೇವರ ಮೂಲ ಹೆಸರು ಓಘಸಿದ್ದ. ಈ ದೇವರ ಒಬ್ಬ ಸಿದ್ದಿಪುರುಷ ಮಹಿಮಾ ಪುರುಷ ಇತನು ಅಮೋಘಸಿದ್ದನ ಮಗನಾದ ಬಿಳಿಯಾನಸಿದ್ದ ಹಾಗೂ ಕುಂತಿದೇವಿ ಇವರ ಎರಡನೇ ಸುಪುತ್ರ. ಇವನು ಸಿದ್ದರ ವಂಶದವನು ಇತನ ಉದ್ದೇಶ ಭಕ್ತರನ್ನ ಉದ್ದಾರ ಮಾಡುವುದಾಗಿತ್ತು.

ಓಘಸಿದ್ದನ ಅಜ್ಜನಾದ ಅಮೋಘಸಿದ್ದನು ಕೈಲಾಸದಲ್ಲಿ ಏಳು ಯುಗಗಳ ಕಾಲ ಭಕ್ತಿ ಮಾಡಿ ಅವರ ಆರಾಧ್ಯ ದೇವರಾದ ಶಿವನಲ್ಲಿ ದುಡಿದು ಭಕ್ತಿ ಮಾಡಿ ಮಳಿಕಿಲ – ಬೆಳಕಿಲ ಓಂ ದ ಕಂಬಳಿ ನೇಮದ ಬೆತ್ತವನ್ನು ಭಕ್ತರಿಗೆ ಭಾಗ್ಯ ಬಂಜೆಯರಿಗೆ ಮಕ್ಕಳು ಕಾಮಧೇನು ಕಲ್ಪವೃಕ್ಷ ಇವುಗಳನೆಲ್ಲ ಶಿವನಲ್ಲಿ ಬೇಡಿ ಪಡೆದುಕೊಂಡನು, ಹೀಗಾಗಿ ಓಘಸಿದ್ದನು ಅವರ ಅಜ್ಜ ಅಮೋಘಸಿದ್ದನು ತಂದಿರುವ ಫಲಗಳಲ್ಲಿ ನೇಮದ ಬೆತ್ತವನ್ನ ಕಾಡಿಬೇಡಿ ನನಗೆ ಇದು ಬೇಕೆ ಬೇಕು ಎಂದನು ಆವಾಗ ಅಮೋಘಸಿದ್ದನು ಈ ನೇಮದ ಬೆತ್ತವನ್ನ ಹಿಡಿದವರಿಗೆ ಮಕ್ಕಳು ಆಗುದಿಲ್ಲ ಇದು ನಿನಗೆ ಬೇಡ ಎಂದಿದನು.

ಮೋಳೆ ಓಘಸಿದ್ದೇಶ್ವರ ದೇವಸ್ಥಾನ

ಆದರೂ ಓಘಸಿದ್ದ ಕೇಳಲಿಲ್ಲ ನನಗೆ ಮಕ್ಕಳು ಬೇಕಾಗಿಲ್ಲ ನನ್ನ ಭಕ್ತರೆ ನನ್ನ ಮಕ್ಕಳು ಅವರಿಗೆ ನಾನು ಈ ಬೆತ್ತಿನಿಂದ ಮಕ್ಕಳ ಭಾಗ್ಯವನ್ನ ಅಂದರೆ ಬಂಜೆತನವನ್ನ ನಿಗಿಸುತ್ತೇನೆ ನನಗೆ ಈ ಬೆತ್ತ ಬೇಕು ಎಂದು ಹಠಮಾಡಿ ಆ ಬೆತ್ತವನ್ನ ಪಡೆದುಕೊಂಡನು ಮುಂದೆ ತಾಯಿ ಆಶಿರ್ವಾದ ಪಡೆದು ಅಲ್ಲಿಂದ ಹೊರಟ್ಟ ಓಘಸಿದ್ದ ಬೆಳಗಾಂವ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮಕ್ಕೆ ಬಂದನು.

ಆದರೆ, ಮೋಳೆ ಗ್ರಾಮದ ಮೊದಲ ಹೆಸರು ಉಪ್ಪಾರಹಟ್ಟಿ ಎಂದು ಗುರುತ್ತಿಸಲಾಗುತ್ತಿತ್ತು ಆ ಒಂದು ಉಪ್ಪಾರಹಟ್ಟಿ ಎಂಬ ಹೆಸರು ಬದಲಾಗಲು ಈ ಸಿದ್ದಿ ಪುರುಷನೆ ಕಾರಣ. ಅದು ಹೇಗೆಂದರೆ ಇಲ್ಲಿಯ ಜನರು ಮೊದಲು ಉಪ್ಪನ್ನ ತಗೆದು ತಮ್ಮ ದಿನನಿತ್ಯದ ಜೀವನ ಸಾಗಿಸುತ್ತಿದ್ದರು ಇದನ್ನ ಕಂಡ ಸಿದ್ದಿ ಪುರುಷ ಓಘಸಿದ್ದ ಈ ದಿನನಿತ್ಯದ ಜೀವನವನ್ನ ನೋಡುತ್ತಾ ತಪ್ಪಸಿನಲ್ಲಿ ಮಗ್ನನಾಗಿರುತ್ತಿದ್ದ. ಅದು ಈಗ ದೇವಸ್ಥಾನದ ಮುಂದಿನ ಸ್ಥಳದಲ್ಲಿ ಅಂದರೆ ರೇವಡಿ ಗಿಡಗಳ ಕೆಳಗಿನ ಪ್ರದೇಶದಲ್ಲಿ ಅವರು ಅಲ್ಲಿ ವಾಸಮಾಡಿದ್ದರು ಅಲ್ಲಿ ಜ್ಞಾನಗ್ರಸ್ಥನಾಗಿ ಕುಳಿತ ಸಂದರ್ಭದಲ್ಲಿ ಅವರಿಗೆ ಉಪ್ಪಾರ ಸಮಾಜದ ಓರ್ವವ್ಯಕ್ತಿ ಅವರಿಗೆ ಆಕಸ್ಮಿಕವಾಗಿ ಬೇಟಿ ನೀಡಿದಾಗ ಆ ವ್ಯೆಕ್ತಿಗೆ ಸಿದ್ದಿಪುರುಷರಾದ ಓಘಸಿದ್ದ ಅವರು ನೀವು ಈ ಉಪ್ಪಾರಹಟ್ಟಿ ಗ್ರಾಮದಲ್ಲಿ ಉಪ್ಪನ್ನ ತೆಗೆದರೆ ನಿಮ್ಮ ದಿನನಿತ್ಯದ ಜೀವನ ಸಾಗಿಸಲು ಮಾತ್ರ ಉಪಯೋಗ ಹೊರೆತು ನೀವು ಸಿರಿಸಂಪತ್ತನ್ನ ಸಂಪಾದಿಸಲು ಸಾಧ್ಯವಿಲ್ಲ ಎಂದು ಹೇಳಿ ಈ ಗ್ರಾಮದ ಮಣ್ಣಿನಲ್ಲಿ ನೀವು ಬಂಗಾರ ಬೆಳೆಯಬಹುದು ಈಗಲೇ ಈ ಉಪ್ಪನ್ನ ತೆಗೆಯುವುದನ್ನ ನಿಲ್ಲಿಸಿ, ಕೃಷಿಗೆ ಅದ್ಯತೆ ನೀಡಿದರೆ ನಿಮ್ಮ ಜೀವನ ರೂಪಿಸಲು ಸಹಕಾರಿಯಾಗಲಿದೆ ಈ ಒಂದು ಮಣ್ಣನ್ನ ಹಿಡಿದು ಹೊನ್ನ ಮಾಡಿ ತೊರಿಸಿದ ಆ ಸಿದ್ದಿಪುರುಷ ಓಘಸಿದ್ದ. ಅವಾಗಿನಿಂದ ಈ ಊರಿಗೆ ಉಪ್ಪಾರಹಟ್ಟಿ ಹೋಗಿ ಹೊನ್ನಮೋಳೆಯಾಯಿತು,

ಮುಂದೆ ಆ ವ್ಯಕ್ತಿ ಓಘಸಿದ್ದರಿಗೆ ಹೀಗೆ ಹೇಳಿದನು ನೀವು ಸಾಮಾನ್ಯವ್ಯೆಕ್ತಿಯಲ್ಲ ನೀವು ಮಹಿಮಾ ಪುರುಷರಿದ್ದಿರಿ ಇನ್ನು ಮುಂದೆ ನೀವೆ ನಮ್ಮಗೆಲ್ಲಾ ಎಂದು ಉಪ್ಪಾರ ಸಮಾಜದ ವ್ಯೆಕ್ತಿ ಓಘಸಿದ್ದ ಸಿದ್ದಿ ಪುರುಷನಿಗೆ ಹೇಳಿದ ಆಗ ಓಘಸಿದ್ದ ನಿಮ್ಮನ್ನ ಉದ್ದಾರ ಮಾಡುವ ಸಲುವಾಗಿ ಲೋಕ ಕಲ್ಯಾಣಕ್ಕಾಗಿಯೇ ನಾನು ಇಲ್ಲಿ ಬಂದಿದ್ದೇನೆ ನಿಮ್ಮಗೆ ಒಳ್ಳೆಯದಾಗುತ್ತೆ ಎಂದರು.

ಮೋಳೆ ಓಘಸಿದ್ದೇಶ್ವರ ದೇವಸ್ಥಾನ

ಮುಂದೆ ಆ ವ್ಯೆಕ್ತಿ ಎಲ್ಲ ಜನರಿಗೆ ಈ ವಿಷಯವನ್ನ ಹೇಳಿ ಇಲ್ಲಿ ಒಬ್ಬ ವ್ಯೆಕ್ತಿ ಕಂಬಳಿ. ಭಂಡಾರ ಚೀಲ. ನೇಮದ ಬೆತ್ತ. ಹಿಡಿದು ಕುಳಿತ ಒಬ್ಬ ಸಿದ್ದಿ ಪುರುಷನಿದ್ದಾರೆ ಎಂದನು ಅದೇರೀತಿ ಇಲ್ಲಿ ಭಕ್ತರ ಸಂಖ್ಯೆಯು ಹೆಚ್ಚಾಯಿತು ಇವರು ಕೂಡಾ ಹಾಗೆಯೇ ಪವಾಡಗಳನ್ನ ಮಾಡುತ್ತಾ ಈಗ ಒಬ್ಬ ದೊಡ್ಡ ಗ್ರಾಮದೇವರಾಗಿ ಕುಳುತ್ತಿದ್ದಾರೆ. ಈ ದೇವರಿಗೆ ಏನು ಬೇಡಿಕೊಂಡರು ಆ ಕೆಲಸಗಳು ನೆರವೆರುತ್ತವೆ ಇದು ಸತ್ಯ ಎಂದು ಇಲ್ಲಿಯ ಜನ ಭಕ್ತರು ನಂಬಿದ್ದಾರೆ.

ಈ ದೇವರಿಗೆ ರಾಜ್ಯ ಹೊರರಾಜ್ಯಗಳಿಂದ ಭಕ್ತರು ಬರುತ್ತಾರೆ ಈ ದೇವರ ಮೇಲೆ ಭಕ್ತರು ಸಂಪೂರ್ಣ ನಂಬಿಕೆ ಇದೆ. ಹಾಗೂ ಪ್ರತಿವರ್ಷ ಯುಗಾದಿ ಎಂದು ರಾಶಿಯ ಮುಖಾಂತರ  ಹಿಂಗಾರು ಬೆಳೆ ಮುಂಗಾರು ಬೆಳೆ ಹಾಗೂ ಅದೇರೀತಿ ಮಳೆಯನ್ನ ಕೇಳುತ್ತಾರೆ ಅವು ಕೂಡಾ ಸತ್ಯವಾಗುತ್ತದೆ. ಈ ದೇವರಿಗೆ ವರ್ಷಕ್ಕೆ ಎರಡು ಸಾರಿ ಜಾತ್ರೆ ಆಗುತ್ತದೆ. ಇಲ್ಲಿ ಸರಿಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಜಾತ್ರೆಯಲ್ಲಿ ಕಾಣಸಿಗುತ್ತಾರೆ,

ವರದಿ : ಪಾರ್ಶ್ವನಾಥ ಶೆಟ್ಟಿ