ಉ.ಕ ಸುದ್ದಿಜಾಲ ಮೋಳೆ :

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಬಸವನಗರದಲ್ಲಿ ತಳವಾರ ಸಮಾಜದ ವತಿಯಿಂದ ಬೃಹತ ಅಭಿನಂದನಾ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ಕೊಣ್ಣೂರ ಮಠ ಹುನ್ನೂರಿನ ವೇದಮೂರ್ತಿ ಪರಮ ಪೂಜ್ಯ ಶ್ರೀ ವಿಶ್ವನಾಥ್ ಸ್ವಾಮಿಗಳು ವಹಿಸಿದ್ದರು ಅಧ್ಯಕ್ಷತೆಯನ್ನು ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಶ್ರೀಮಂತ ಪಾಟೀಲ ಮುಖ್ಯ ಅಥಿತಿಗಳಾಗಿ ಆಗಮಿಸಿದ ಲಕ್ಷ್ಮಣ್ ಸಂಗಪ್ಪ ಸವದಿ  ಘನ ಉಪಸ್ಥಿತಿಯನ್ನು ವಹಿಸಿದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎನ್ ರವಿಕುಮಾರ.

ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್ ಟಿ)ಗೆ ಸೇರಿಸಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ಕ್ರತಜ್ಞತೆ ಯನ್ನು ಸಲ್ಲಿಸುವ ನಿಟ್ಟಿನಲ್ಲಿ ಅಭಿನಂದನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಈ ದಿನಮಾನಗಳಲ್ಲಿ ಅವಕಾಶಗಳು ದೊರಕುವುದು ಕಡಿಮೆ ಅವಕಾಶ ಸಿಕ್ಕಾಗ ಸದುಪಯೋಗ ಪಡೆದುಕೊಳ್ಳಿ ಪಡೆದುಕೊಳ್ಳಬೇಕು ಎಂದರು ಹಾಗೂ ತಳವಾರ್ ಸಮಾಜವು ಕೊಟ್ಟ ಮಾತಿಗೆ ತಪ್ಪದ ಸಮುದಾಯ ಎಂದು ನುಡಿದರು.

ಕಾಗವಾಡ ಮತಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ಅವರು ಮಾತನಾಡಿ ಪರೋಪಕಾರಕ್ಕೆ ಮತ್ತೊಂದು ಉದಾಹರಣೆ ಎಂದರೆ ಅದು ನಮ್ಮ ತಳವಾರ ಸಮುದಾಯ ಯಾರು ಉಪಕಾರ ಮಾಡಿರುತ್ತಾರೋ ಅವರಿಗೆ ಕೃತಜ್ಞತಾ ಮನೋಭಾವದಿಂದ ಸಾಕಷ್ಟು ಸಾರಿ ನಮ್ಮನ್ನ ಗೌರವಿಸಿದ್ದೀರಿ ಇದಕ್ಕೆ ನಾನು ಋಣಿಯಗಿರುತ್ತೇನೆ ಎಂದರು.

ಇದೆ ಸಂಧರ್ಭದಲ್ಲಿ ತಳವಾರ ಸಮಾಜದ ಮುಖಂಡರಾದ ಗಂಗಾರಾಮ ತಳವಾರ. ಜಿಲ್ಲಾಧ್ಯಕ್ಷರಾದ ದಿಲೀಪ ಕುರುಂದವಾಡೆ, ಉಮೇಶ್ ಕೋಳಿ,  ಸಿದ್ರಾಯ ಗಸ್ತಿ, ಪ್ರಕಾಶ ಅಪ್ರಜ, ಅಪ್ಪು ಸನದಿ, ನಾಮದೇವ ಕೇರಿಕಾಯಿ, ಸಂಜು ಕೋಳಿ, ಅಣ್ಣಪ್ಪ ತಳವಾರ, ಮಹಾದೇವ ಕೋಳಿ ತಳವಾರ ಸಮಾಜ ಭಾಂದವರು ಉಪಸ್ಥಿತರಿದ್ದರು.