ಉತ್ತರ ಕರ್ನಾಟಕ ಸುದ್ದಿಜಾಲ ರಾಯಬಾಗ :
ಬಸ್ ಓವರ ಟೇಕ ಮಾಡಲು ಹೋಗಿ ಆಯ ತಪ್ಪಿದ ಬೈಕ ಸವಾರ, ಬೈಕ್ ಹಿಂಬದಿ ಕುಳಿತ ವ್ಯಕ್ತಿ ಆಯಾ ತಪ್ಪಿ ಕೆಳಗೆ ಬಿದ್ದು ಬಸ್ ಹಿಂಬದಿ ಚಕ್ರಕ್ಕೆ ಸಿಕ್ಕಿ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹಾರೂಗೇರಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಮೃತ ಪಟ್ಟ ವ್ಯಕ್ತಿಯನ್ನು ಕಾಗವಾಡದ ಪಟ್ಟಣದ ನಿಖಿಲ್ ಪಾಟೀಲ ಎಂದು ಗುರುತಿಸಲಾಗಿದೆ. ಬೈಕ್ ಸವಾರ ಬೈಕ್ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಖಿಳೇಗಾಂವ ಗೋಕಾಕ ಮೂಲಕ ಬೈಲಹೊಂಗಲಗೆ ಹೋಗುತ್ತಿದ್ದ ಬಸ್. ಈ ಘಟನೆ ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.