ಉ.ಕ ಸುದ್ದಿಜಾಲ ರಾಯಬಾಗ :
5 ತಿಂಗಳ ಗರ್ಭಿಣಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಥವಾ ಕೊಲರ ಮಾಎಲಾಗಿದೆಯಾ ಎಂಬ ಸಂಶಯ ಸದ್ಯ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಭೆಂಡಾವಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ.
5 ತಿಂಗಳ ಗರ್ಭಿಣಿ ಮಹಿಳೆ ಆತ್ಮಹತ್ಯೆನೆ, ಕೊಲೆನಾ? – ಸಂಬಂಧಿ ಹೇಳೊದು ಹೀಗೆ
ಬೆಂಡವಾಡ ಗ್ರಾಮದ ಲಲಿತಾ ಸದಾನಂದ ಕರಜಗಿ 24 ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆ ಶಂಕೆ, ಲಲಿತಾಳನ್ನ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಲಲಿತಾ ಕುಟುಂಬಸ್ಥರ ಆರೋಪ,
ಘಟನೆ ಆಗುತ್ತಿದ್ದಂತೆ ಲಲಿತಾ ಪತಿ ಹಾಗೂ ಕುಟುಂಬಸ್ಥರು ಪರಾರಿಯಾಗಿದ್ದು ಹಲವಾರು ಸಂಶಯಕ್ಕೆ ಕಾರಣವಾಗಿದೆ. ಮುಗಿಲು ಮುಟ್ಟಿದ ಮೃತ ಲಲಿತಾ ಕುಟುಂಬಸ್ಥರ ಆಕ್ರಂದನ,
ಸ್ಥಳಕ್ಕೆ ರಾಯಬಾಗ ಪೋಲಿಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.