ಉ.ಕ ಸುದ್ದಿಜಾಲ ಉತ್ತರ ಪ್ರದೇಶ :
ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಸೊಸೆ ಆಗಬೇಕಾದವಳ ಜೊತೆಯೇ ಮದುವೆಯಾದ ವಿಲಕ್ಷಣ ಘಟನೆ ನಡೆದಿದೆ. ತನ್ನ ಭಾವಿ ಸೊಸೆ ಜೊತೆ ಮಾವನೇ ಪ್ರೀತಿಯ ಬಲೆಗೆ ಬಿದ್ದಿದ್ದಾನೆ. ಮಾವ- ಭಾವಿ ಸೊಸೆ ಮದುವೆಗೆ ವಿರೋಧಿಸಿದ ಹೆಂಡತಿ, ಮಗನಿಗೆ ವ್ಯಕ್ತಿಯೇ ಥಳಿಸಿದ್ದಾನೆ.
ಉತ್ತರ ಪ್ರದೇಶದ ರಾಮಪುರದಲ್ಲಿ ಶಕೀಲ್ ಎಂಬಾತ ಮೊದಲಿಗೆ ತನ್ನ ಅಪ್ರಾಪ್ತ ಮಗನಿಗೆ ಓರ್ವ ಯುವತಿಯ ಜೊತೆ ಮದುವೆ ನಿಶ್ಚಯ ಮಾಡಿದ್ದ. ಆ ಯುವತಿಯ ಮನೆಗೆ ಹೋಗಿ ಬರುತ್ತಾ ಆಕೆಯ ಜೊತೆ ಪ್ರೇಮದ ಬಲೆಗೆ ಬಿದ್ದಿದ್ದಾನೆ.
ಶಕೀಲ್ ತನ್ನ ಅಪ್ರಾಪ್ತ ಮಗನಿಗೆ ಮದುವೆ ಮಾಡುವುದಕ್ಕೆ ಆತನ ಮನೆಯಲ್ಲೇ ವಿರೋಧ ಇತ್ತು. ಆಗ ತನ್ನ ಕುಟುಂಬದ ಸದಸ್ಯರಿಗೆ ಹೊಡೆದು ಮದುವೆಗೆ ಒಪ್ಪಿಸಿದ್ದಾನೆ. ಬಳಿಕ ತನ್ನ ಸೊಸೆ ಆಗಬೇಕಾದವಳ ಜೊತೆಯೇ ಫೋನ್ನಲ್ಲಿ ಮಾತುಕತೆ ಶುರುವಿಟ್ಟುಕೊಂಡಿದ್ದ ಎಂದು ಶಕೀಲ್ ಪತ್ನಿ ಶಬಾನಾ ಹೇಳಿದ್ದಾರೆ.
ಶಕೀಲ್ ಮತ್ತು ಶಬಾನಾ ದಾಂಪತ್ಯಕ್ಕೆ ಸಾಕ್ಷಿಯಾಗಿ 6 ಮಂದಿ ಮಕ್ಕಳಿದ್ದಾರೆ. ಶಬಾನಾಗೆ ಪತಿಯ ವರ್ತನೆ, ಧೋರಣೆ ಬಗ್ಗೆ ಅನುಮಾನ ಬಂದಿದೆ. ತನ್ನ ಮಗನನ್ನು ಮದುವೆಯಾಗಬೇಕಾದ ಯುವತಿಯ ಜೊತೆಯೇ ಪತಿ ಶಕೀಲ್ಗೆ ಅಫೇರ್ ಇದೆ ಎಂಬ ಅನುಮಾನ ಶಬಾನಾಗೆ ಬಂದಿದೆ.
ಇಡೀ ದಿನ ಶಕೀಲ್, ಯುವತಿಯ ಜೊತೆ ವಿಡಿಯೋ ಕಾಲ್ನಲ್ಲೇ ಮಾತನಾಡುತ್ತಿದ್ದ. ಹೀಗಾಗಿ ಶಬಾನಾ ಮತ್ತು ಮಗ ಸೇರಿಕೊಂಡು ಶಕೀಲ್ ವಿರುದ್ಧ ಸಾಕ್ಷ್ಯ ಸಂಗ್ರಹಿಸಿದ್ದರು. ಕೊನೆಗೆ ಎರಡು ಭಾರಿ ಶಕೀಲ್-ಯುವತಿ ಜೊತೆಯಲ್ಲಿರುವಾಗಲೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಈಗ ಶಕೀಲ್‌ನ 15 ವರ್ಷದ ಮಗ, ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಹೆಂಡತಿ, ಮಗನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಳಿಕ ಶಕೀಲ್, ಆ ಯುವತಿಯ ಜೊತೆಯೇ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಮನೆಯಲ್ಲಿದ್ದ 2 ಲಕ್ಷ ರೂಪಾಯಿ ಕ್ಯಾಶ್, 17 ಗ್ರಾಂ ಚಿನ್ನ ತೆಗೆದುಕೊಂಡು ಹೋಗಿ ಆ ಯುವತಿಯನ್ನೇ ಮದುವೆಯಾಗಿದ್ದಾನೆ.
ಈ ವರ್ಷದ ಏಪ್ರಿಲ್ನಲ್ಲಿ ಇದೇ ಉತ್ತರ ಪ್ರದೇಶ ರಾಜ್ಯದ ಅಲಿಘಡ ಜಿಲ್ಲೆಯಲ್ಲಿ ಹೆಣ್ಣಿನ ತಾಯಿಯೇ ತನ್ನ ಭಾವಿ ಅಳಿಯನ ಜೊತೆಯೇ ಓಡಿ ಹೋಗಿ ಮದುವೆಯಾಗಿದ್ದಳು. ಈಗ ಇದು ಉಲ್ಟಾ ಕೇಸ್. ಇಲ್ಲಿ ಹುಡುಗನ ತಂದೆ, ಭಾವಿ ಸೊಸೆ ಜೊತೆ ಓಡಿ ಹೋಗಿ ಮದುವೆಯಾಗಿದ್ದಾನೆ. ಸಂಬಂಧಗಳಿಗೆ ಬೆಲೆ, ಮೌಲ್ಯ ಯಾವುದು ಇಲ್ಲವಾಗುತ್ತಿದೆ.
ತನ್ನ ಭಾವಿ ಸೊಸೆ ಜೊತೆ ಮಾವನೇ ಪ್ರೀತಿಯ ಬಲೆಗೆ
