ಉ.ಕ ಸುದ್ದಿಜಾಲ ವಿಜಯಪುರ :
ಮೊಹರಮ್ ಹಬ್ಬದ ವೇಳೆ ಅವಘಡ ಪ್ರಕರಣ. ಆಟಿಕೆ ವಸ್ತುಗಳು ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡುವ ತಳ್ಳುವ ಗಾಡಿ ಟಿಸಿಗೆ ತಗುಲಿ ಓರ್ವ ಸಾವು. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆಯಾಗಿದೆ.
ಆಟಿಕೆ ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮೊಹಮ್ಮದ್ ಇನಾಂದಾರ್ (40) ಸಾವನಪ್ಪಿರುರವ ವ್ಯಕ್ತಿ ವಿದ್ಯುತ್ ಪ್ರವಹಿಸಿದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆ. ವಿಜಯಪುರ ನಗರದ ಮೆಹತರ್ ಮಹಲ್ ಬಳಿ ಜುಲೈ 16 ರಂದು ನಡೆದ ಘಟನೆ.
ತಳ್ಳುವ ಗಾಡಿ ಕಬ್ಬಿಣದಾಗಿದ್ದು ಟಿಸಿಗೆ ತಾಗಿದ ಕಾರಣ ಪ್ರವಹಿಸಿದ ವಿದ್ಯುತ್ ಕರೆಂಟ್ ಶಾಕ್ ನಿಂದ ಮೊಹಮ್ಮದ್ ಸಾವು. ಮೊಹರಮ್ ಹಬ್ಬದ ಮೆರವಣಿಗೆಯ ಮುಂದೆ ಮೊಹಮ್ಮದ್ ಅಟಿಕೆ ಮಾರಾಟ ಮಾಡುವ ತಳ್ಳುವ ಗಾಡಿಯೊಂದಿಗೆ ತೆರಳುತ್ತಿದ್ದ.
ಈ ವೇಳೆ ಕಾರಿಗೆ ದಾರಿ ಬಿಡುವ ಭರದಲ್ಲಿ ಟಿಸಿಗೆ ತಾಗಿದ ಕಬ್ಬಿಣದ ತಳ್ಳುವ ಗಾಡಿ. ವಿಜಯಪುರರ ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.