ಚಿಕ್ಕೋಡಿ :

ಮಲ್ಲಿಕಾರ್ಜುನ ಮುತ್ತಪ್ಪ ಕುಂಬಾರ (೧೪) ಹಾಗೂ ಮುತ್ತಪ್ಪ ಬಾಳಪ್ಪ ಕುಂಬಾರ (೪೦) ಮೃತ ದುರ್ದೈವಿಗಳು

ಕಳೆದ ಅಕ್ಟೋಬರ್ ೨೯ ದಿನದಂದು ಹಾವು ಕಚ್ಚಿದ್ದು ಅ.೩೧ ರಂದು ಮಲ್ಲಿಕಾರ್ಜುನ ಮುತ್ತಪ್ಪ ಕುಂಬಾರ ಮೃತಪಟ್ಟರೆ, ಸೆ.೨ ರಂದು ಮುತ್ತಪ್ಪ ಬಾಳಪ್ಪ ಕುಂಬಾರ ಮೃತಪಟ್ಟಿದ್ದಾನೆ

ಅಥಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಚಿಕಿತ್ಸೆ ಫಲಕಾರಿಯಾಗದೆ ಅಪ್ಪ ಮಗ ಇಬ್ಬರೂ ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ

ಇಬ್ಬರನ್ನೂ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ


ಘಟನೆ ವಿವರ :

ಕಳೆದ ಅಕ್ಟೋಬರ್ ೨೯ರಂದು ನಸುಕಿನ ಜಾವ ಹೊಲಕ್ಕೆ ನೀರು ಹಾಯಿಸಲು ಹೋಗಿದ್ದ ಇಬ್ಬರಿಗೂ ಹಾವು ಕಚ್ಚಿದೆ

ಕತ್ತಲು ಇರುವುದರಿಂದ ಇರುವೆ ಅಥವಾ ಇನ್ನೆನು ಕಡದಿರಬಹುದು ಎಂದು ಭಾವಿಸಿದ್ದಾರೆ

ಮುಂಜಾನೆ ಹೊತ್ತಿಗೆ ತೀವ್ರ ಅಸ್ವಸ್ಥ ಆಗಿದ್ದರಿಂದ ಅಥಣಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಒಬ್ಬರಂತೆ ಒಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನಲ್ಲಿ ನಡೆದಿದೆ.