ತುಮಕೂರು
ಪೋಲಿಸ್ ಎಂದು ಹೇಳಿ ಅತ್ಯಾಚಾರ ಮಾಡಿದ್ದ ಆರೋಪಿ ಬಂಧನ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ
ಪ್ರದೀಪ ಕೆಂಚ (37) ಬಂದಿತ ಆರೋಪಿ. ಕಳೆದ ಆಗಸ್ಟ್ 1 ರಂದು ಕುಣಿಗಲ್ ತಾಲೂಕಿನ ಶ್ರೀನಿವಾಸ ದೇವರ ಬೆಟ್ಟಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಆರೋಪಿ. ಸಾಹೇಬ್ರು ನಿನ್ನ ಕರಿತಿದ್ದಾರೆ ಬಾ ಅಂತಾ ಹೇಳಿ ಕರೆದುಕೊಂಡು ಹೋಗಿದ್ದ ಆರೋಪಿ.
ಚಾಕು ತೋರಿಸಿ ಅತ್ಯಾಚಾರ ಎಸಗಿದ್ದ ಆರೋಪಿ. ಅತ್ಯಾಚಾರ ಎಸಗಿ 40 ಗ್ರಾಂ ಚಿನ್ನದ ಸರ,ಮೊಬೈಲ್, ಎಟಿಎಮ್ ಕಾರ್ಡ್ ದೋಚಿ ಪರಾರಿಯಾಗಿದ್ದ. ಆರೋಪಿ ಪ್ರದೀಪ್ ಕಾರು ಚಾಲಕ ಎನ್ನಲಾಗಿದೆ. ಟಮಂಡ್ಯ ಜಿಲ್ಲೆಯ ನಾಮಮಂಗಲ ತಾಲೂಕು ದೊಡ್ಡನಾಗನಹಳ್ಳಿ ಗ್ರಾಮ ನಿವಾಸಿ ಪ್ರದೀಪ್. ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.