ವಿಜಯಪುರ ಜಿಲ್ಲೆ ತಿಕೋಟಾ ಮೂಲದ ನಿವಾಸಿ ಮಹಾವೀರ ಎನ್ನುವವರು ಹರಕೆ 6,50,000 ರೂ ಸವಾಲು ಕೂಗಿ ತೆಂಗಿನಕಾಯಿ ಪಡೆದ ವ್ಯಕ್ತಿ

ಬಾಗಲಕೋಟೆ :

ಬಾಗಲಕೋಟೆ ಜಿಲ್ಲೆ  ಜಮಖಂಡಿ ತಾಲೂಕಿನ ಸುಕ್ಷೇತ್ರ ಚಿಕ್ಕಲಕಿ ಗ್ರಾಮದ‌ಮಾಳಿಂಗರಾಯನ ಗದ್ದುಗೆ ಮೇಲಿನ ತೆಂಗಿನಕಾಯಿ 6,50,000 ರೂ ಗೆ ಸವಾಲು ಪಡೆಯಲಾಗಿದೆ.

ವಿಜಯಪುರ ಜಿಲ್ಲೆ ತಿಕೋಟಾ ಮೂಲದ ನಿವಾಸಿ ಮಹಾವೀರ ಎನ್ನುವವರು ಹರಕೆ 6,50,000 ರೂ ಸವಾಲು ಕೂಗಿ ತೆಂಗಿನಕಾಯಿ ಪಡೆದ ವ್ಯಕ್ತಿ. ಮಾಳಿಂಗರಾಯ ಜಾತ್ರೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತಕ್ಕೆ ಕಾಯಿ ಸವಾಲ್

ಪ್ರತಿ ವರ್ಷ ಶ್ರಾವಣ ಮಾಸದ ಮುಕ್ತಾಯದ ವೇಳೆ ನಡೆಯುವ ಮಾಳಿಂಗರಾಯ ಜಾತ್ರೆ ಬಳಿಕ ದೇವರ ಗದ್ದುಗೆ ಮೇಲಿನ ತೆಂಗಿನಕಾಯಿ ಹಾಗೂ ಪಲ್ಲಕ್ಕಿ ಮೇಲಿನ ಕಾಯಿಗಳ ಹರಾಜು ನಡೆಯುತ್ತದೆ. ಗದ್ದುಗೆ ಮೇಲಿನ ಪಲ್ಲಕ್ಕಿ ಮೇಲಿನ ಕಾಯಿ‌ ಮನೆಗೆ  ಒಯ್ದರೆ ಒಳಿತಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.