ಉ.ಕ ಸುದ್ದಿಜಾಲ ಬಾಗಲಕೋಟೆ :

ಕನ್ನಡ ಬಸ್‌ಗಳಿಗೆ ಮರಾಠಿ ಪುಂಡರ ಮಸಿ ಬಳಿದ ವಿಚಾರ. ಮರಾಠ ಪುಂಡರಿಗೆ ಪ್ರತ್ಯುತ್ತರ ನೀಡಿದ ಬಾಗಲಕೋಟೆ ಕರವೇ ಕಾರ್ಯಕರ್ತರು. ಮಹಾರಾಷ್ಟ್ರ ಬಸ್ ತಡೆದು ಚಾಲಕ, ನಿರ್ವಾಹಕರಿಗೆ ಜೈ ಕರ್ನಾಟಕ ಎಂದು ಹೇಳಿಸಿದ ಕರವೇ.

ಚಾಲಕ , ನಿರ್ವಾಹಕನಿಗೆ ಕನ್ನಡ ಶಾಲು ಹೊದಿಸಿ, ಜೈ ಕರ್ನಾಟಕ ಘೋಷಣೆ ಹಾಕಿಸಿದ ಕರವೇ ಕಾರ್ಯಕರ್ತರು. ಮಹಾರಾಷ್ಟ್ರ ಬಸ್ ಗೆ ಕಪ್ಪು ಮಸಿ ಬಳೆದು ಆಕ್ರೋಶ. ಮಹಾ ಬಸ್ ಮೇಲೆ ಜೈ ಕನ್ನಡ ಎಂದು ಬರೆದು ಜೈಕಾರ. ಬಾಗಲಕೋಟೆ ಜಿಲ್ಲೆಯ ಹುನಗುಂದ
ಕೂಡಲಸಂಗಮ ಕ್ರಾಸ್ ಬಳಿ ಘಟನೆ.

ತಡರಾತ್ರಿ ಇಲಕಲ್ ಮಾರ್ಗವಾಗಿ ಸೋಲ್ಲಾಪೂರಕ್ಕೆ ಹೊರಟಿದ್ದ ಬಸ್. ನಿನ್ನೆಯಷ್ಟೇ ಇಲಕಲ್ ಡಿಪೋ ಬಸ್ ಡ್ರೈವರ್ ಗೆ ಕೇಸರಿ ಬಣ್ಣ ಬಳಿದು ಜೈ ಕರ್ನಾಟಕ ಘೋಷಣೆ ಕೂಗಿಸಿದ್ದ ಮರಾಠ ಪುಂಡರು.