ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿಯಲ್ಲಿ ಚಾಕೋಲೆಟ್ ಹೆಸರಲ್ಲಿ ಗಾಂಜಾ ದಂಧೆ. ಚಾಕೋಲೆಟ್ ರೂಪದಲ್ಲಿ ಯುವ ಸಮೂಹದ ಕೈಗೆ ಗಾಂಜಾ ಕೊಡ್ತಿರೋ ಖದೀಮರು ಜಾಲ ಪತ್ತೆ. ಸಿಹಿ ಚಾಕೋಲೆಟ್‌ನೊಳಗೆ ಮಾದಕ ವಸ್ತು ಬೆರೆಸಿ ಮಾರಾಟ.
ಕಾಲೇಜು ವಿದ್ಯಾರ್ಥಿಗಳೇ ಟಾರ್ಗೆಟ್ ಎಂದ ಕಮಿಷನರ್. ಅಪ್ರಾಪ್ತರನ್ನೇ ವ್ಯಸನಿಗಳನ್ನಾಗಿಸಲು ದಂಧೆಕೋರರ ಖತರ್ನಾಕ್ ಪ್ಲ್ಯಾನ್. 5 ಗ್ರಾಮ ಗಾಂಜಾ ಮಿಶ್ರಿತ ಚಾಕೋಲೆಟ್‌ಗೆ 50 ರೂಪಾಯಿ. ನಿಯಮಗಳ ಪ್ರಕಾರ 50ರೂಪಾಯಿ ಚಾಕಲೇಟ್ . 40ಗ್ರಾಮ ತೂಕ ಇರಬೇಕು ಪ್ರಕರಣ ಸಂಬಂಧ ಈಗಾಗಲೇ ಉತ್ತರ ಪ್ರದೇಶದ ಭೋಲು ಪ್ರಜಾಪತಿ ಬಂಧನ.
ಯುಪಿ-ಬಿಹಾರದಿಂದ ಕರ್ನಾಟಕದವರೆಗೆ ಗಾಂಜಾ ಚಾಕೋಲೆಟ್ ಜಾಲ. ಕಾಲೇಜುಗಳ ಸುತ್ತವೇ ಮಾದಕ ದಂಧೆ ಹೆಚ್ಚು. ಮಕ್ಕಳ ಬಗ್ಗೆ ನಿಗಾ ವಹಿಸುವಂತೆ ಪೊಲೀಸರ ಮನವಿ.
