ಉ.ಕ ಸುದ್ದಿಜಾಲ ಬೆಳಗಾವಿ :
ಎರಡು ಸರ್ಕಾರಿ ಬಸ್ ನಡುವೆ ಅಪಘಾತ ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಆಶ್ರಯ ನಗರದಲ್ಲಿ ಘಟನೆ. ನಿಯಂತ್ರಣ ತಪ್ಪಿ ಬಸ್ ಗೆ ಹಿಂಬದಿ ಗುದ್ದಿದ ಮತ್ತೊಂದು ಬಸ್.
ಬೈಲಹೊಂಗಲ ದಿಂದ ಬೇವಿನಕೊಪ್ಪ ಹೋಗುತ್ತಿದ್ದ ಬಸ್. ಮುಂದೆ ಹೋಗುತ್ತಿದ್ದ ಬಸ್ ಗೆ ಹಿಂಬದಿಯಿಂದ ಗುದ್ದಿದ ಬಸ್. ಎರಡು ಬಸ್ ನ ಸುಮಾರು 25ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ.
ವಿದ್ಯಾರ್ಥಿಗಳಿಗೂ ಗಾಯ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
