ಉ.ಕ ಸುದ್ದಿಜಾಲ ಅಥಣಿ :

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ‌ಬಳ್ಳಿಗೇರಿ ಗ್ರಾಮದ ಯುವಕನ ಕೊಲೆ. ಕೊಲೆ ಪ್ರಕರಣ ಬೇಧಿಸಿ ಮಾಜಿ ಪ್ರಿಯಕರನ ಜೊತೆಗೆ ಲೇಡಿಯನ್ನು ಜೈಲಿಗಟ್ಟಿದ ಅಥಣಿ ಪೊಲೀಸರು. ರಣವೀರಸಿಂಗ್ ರಜಪೂತ (32) ಪ್ರೇಯಸಿಯಿಂದ ಕೊಲೆಯಾದ ದುರ್ದೈವಿ.

ವಿಜಯಪುರ ಜಿಲ್ಲೆಯ ರೋಣಿಹಾಳ ಗ್ರಾಮದ ಬೈರು ಪವಾರ್ (37) ಕೊಲೆಗೈದ ಆರೋಪಿ. ಬೈರು ಪವಾರ್ ಜೊತೆಗೆ ಕೊಲೆ ಸಂಚು ರೂಪಿಸಿದ ಶ್ರೀದೇವಿ ರಜಪೂತ ‌ಕೂಡ ಬಂಧನ. ಕಳೆದ ಐದಾರು ವರ್ಷಗಳಿಂದ ಇತ್ತು ಶ್ರೀದೇವಿ ರಣವೀರಸಿಂಗ್ ಅನೈತಿಕ ಸಂಬಂಧ.

ಯಾರಿಗೂ ಗೊತ್ತಾಗದಂತೆ ‌ಅನೈತಿಕ ಸಂಬಂಧ ಹೊಂದಿದ್ದ ಜೋಡಿ. ಈ ಮಧ್ಯೆ ಶ್ರೀದೇವಿ ಪುತ್ರಿಯನ್ನು ಕೊಡುವಂತೆ ಕೇಳಿದ್ದ ರಣವೀರಸಿಂಗ್ ಕುಟುಂಬ ಸದಸ್ಯರು. ರಣವೀರಸಿಂಗ್ ಸಹೋದರ ನಾರಾಯಣ್‌ಗೆ ಮದುವೆ ಮಾಡಿಕೊಡುವಂತೆ ಬೇಡಿಕೆ.

ಇದಕ್ಕೊಪ್ಪದೇ ರಣವೀರಸಿಂಗ್ ಜೊತೆಗಿನ ಸಂಬಂಧ ‌ಮುರಿದುಕೊಂಡಿದ್ದ ಶ್ರೀದೇವಿ. ಹುಡುಗಿ ಕೊಡದಿದಕ್ಕೆ ಎರಡೂ ಕುಟುಂಬಗಳ ಮಧ್ಯೆ ಆಗಾಗ ನಡೆಯುತ್ತಿದ್ದ ಗಲಾಟೆ. ಈ ಮಧ್ಯೆ ರಣವೀರಸಿಂಗ್‌‌ನಿಂದ ಶ್ರೀದೇವಿಗೆ ವಿಪರೀತ ಲೈಂಗಿಕ ‌ಕಿರುಕುಳ.