ಉ.ಕ ಸುದ್ದಿಜಾಲ ಅಥಣಿ :
ವ್ಯಕ್ತಿಯೊಬ್ಬ ಬ್ಯಾಗ್ ಕಳೆದುಕೊಂಡಿದ್ದ . ವಿಜಯಪುರ ಜಿಲ್ಲೆಯ ರೇವಣಸಿದ್ದ ವಿಠ್ಠಲ ಹೂಗಾರ (ಹೊರ್ತಿ) ಇವರು ಸವದತ್ತಿಗೆ ಹೋಗುವಾಗ ಖವಟಕೊಪ್ಪ ಮಾರ್ಗವಾಗಿ ತನ್ನ ಬ್ಯಾಗ್ ಒಂದನ್ನು ಕಳೆದುಕೊಂಡಿದ್ದಾನೆ.
ನಂತರ ಖವಟಕೊಪ್ಪ ಗ್ರಾಮದ ಪ್ರದೀಪ್ ಬಾಬು ನಂದಗಾಂವ್ ಇವರಿಗೆ ಸಿಕ್ಕದ್ದು, ಅದರಲ್ಲಿ ನೋಡಲಾಗಿ ಬಂಗಾರದ ಚೈನ್, ಖಡಗ ಸೇರಿದಂತೆ ಸುಮಾರು 2ಲಕ್ಷ ರೂ. ಬೆಲೆಬಾಳುವ ಬಂಗಾರದ ಆಭರಣ ಇರುವುದು ಕಂಡುಬಂದಿದೆ.
ನಂತರ ಬಂಗಾರದ ಆಭರಣವಿರುವ ಬ್ಯಾಗ್ ನ್ನು ಖವಟಕೊಪ್ಪ ಗ್ರಾಮದ ಪ್ರದೀಪ್ ಎಂಬುವವರು ಅಥಣಿ ಪೊಲೀಸ್ ಠಾಣೆಗೆ ತಂದು ಒಪ್ಪಿಸಲಾಗಿ, ವಾರಸುದಾರರಿಗೆ 2 ಲಕ್ಷ ರೂ. ಬೆಲೆ ಬಾಳುವ ಬಂಗಾರದ ಆಭರಣ ಅಥಣಿ ಪೊಲೀಸರು ವಾರಸುದಾರನಿಗೆ ಮರಳಿಸಿದ್ದಾರೆ.
ಬಂಗಾರವಿರುವ ಬ್ಯಾಗ್‌ನ್ನು ಅಥಣಿ ಪೋಲಿಸ್ ಠಾಣೆಗೆ ತಂದು ಒಪ್ಪಿಸಿದ ವ್ಯಕ್ತಿಯ ಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ ವ್ಯಕ್ತಪಡಿಸಿದೆ.
ವಾರಸುದಾರರಿಗೆ 2 ಲಕ್ಷ ರೂ. ಬೆಲೆ ಬಾಳುವ ಬಂಗಾರ ಆಭರಣ ಮರಳಿಸಿದ ಅಥಣಿ ಪೊಲೀಸ
