ಉ.ಕ ಸುದ್ದಿಜಾಲ ಅಥಣಿ :
ಚಿಕ್ಕೋಡಿ ಉಪವಿಭಾಗದಲ್ಲಿ ಮರಳು ಮಾಫಿಯಾ ಅಟ್ಟಹಾಸ ಮೆರೆಯುತ್ತಿದೆ. ಹಳ್ಳ, ಕೊಳ್ಳಗಳ ಗರ್ಭವನ್ನೇ ಬಗೆಯುತ್ತಿದ್ದಾರೆ ಮರಳು ದಂಧೆಕೋರರು. ಅಧಿಕಾರಿಗಳಿಗೆ ಇದು ಗೊತ್ತಿದೆಯೋ ಗೊತ್ತಿಲ್ಲ. ಆದರೆ, ಇದರಲ್ಲಿ ಅವರು ಶಾಮೀಲಾಗಿರುವುದರಿಂದಲೇ ಇಷ್ಟೊಂದು ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವ ಆರೋಪವಂತೂ ಸ್ಥಳೀಯರಿಂದ ಬಲವಾಗಿ ಕೇಳಿ ಬರುತ್ತಿದೆ. ಮರಳು ದಂಧೆಕೋರರು ಹಗಲ್ಲೋತ್ತಲೇ ಹಳ್ಳವನ್ನ ಅಗೆದು ಪಕ್ಕದ ರಾಜ್ಯಕ್ಕೆ ಸಾಗಿಸುತ್ತಿದ್ದರು ಮಾತ್ರ ಅಧಿಕಾರುಗಳು ಮೌನವಹಿಸಿದ್ದು ಅನೇಕ ಸಂಶಯಕ್ಕೆ ಕಾರಣವಾಗಿದೆ.
ಮರಳು ದಂಧೆಕೋರರು ರಾತ್ರಿಯಾಗುವುದೇ ತಡ ಕರ್ನಾಟಟಕದ ಮರಳನ್ನ ಪಕ್ಕದ ಮಹಾರಾಷ್ಟ್ರದ ರಾಜ್ಯಕ್ಕೆ ಸಾಗಿಸುತ್ತಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಾಯಣಟ್ಟಿ ಗ್ರಾಮದ ಮಧ್ಯದಲ್ಲಿ ಸುಮಾರು 15 ದಿನಕ್ಕೂ ಹೆಚ್ಚಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದರು ಸ್ಥಳೀಯ ತಾಲೂಕಾಡಳಿತ ಮೌನ ವಹಿಸಿದ್ದು ಸಂಶಯಕ್ಕೆ ಕಾರಣವಾಗಿದೆ. ಕಳೆದ ಒಂದುವರೆ ತಿಂಗಳ ಹಿಂದೆ ಕೂಡಾ ಆಕ್ರಮವಾಗಿ ಮರಳು ಸಾಗಾಣಿಕೆದಾರರ ವಿರುದ್ದ ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು, ಈಗ ಮತ್ತೆ ಮರಳು ಕಳ್ಳರು ರಾಜಾರೋಷವಣಗಿ ಹಳ್ಳದಿಂದ ಮರಳನ್ನ ತೆಗೆದು ರಾತ್ರಿ ಹೊತ್ತಿಗೆ ಮರಳನ್ನ ಸಾಗಾಣಿಕೆ ಮಾಡುತ್ತಿದ್ದಾರೆ.
ಮಹಾರಾಷ್ಟ್ರದ ಗಡಿಯಲ್ಲಿರುವ ಕಾಗವಾಡ ಹಾಗೂ ಅಥಣಿ ತಾಲೂಕಿನಲ್ಲಿ ಎಗ್ಗಿಲ್ಲದ ಮಣ್ಣು, ಮರಳು ಸಾಗಾಣಿಕೆ ಮಾಡುವುದು ರೂಢಿಯಾಗಿದ್ದು, ಗಡಿಯಲ್ಲಿ ಇರುವಂತ ಗ್ರಾಮಗಳಿಂದ ಮಹಾರಾಷ್ಟ್ರದ ಸಾಂಗಲಿ, ಮಿರಜ, ಕೊಲ್ಲಾಪೂರ, ಜತ್ತ ಹೀಗೆ ಹಲವಾರು ಪಟ್ಟಣಗಳಿಗೆ ಮರಳು ಸಾಗಿಸುವುದು ಸರ್ವೆ ಸಾಮಾನ್ಯವಾಗಿದೆ. ಈ ಮರಳು ಕಾಗವಾಡ ತಾಲೂಕಿನ ಮಂಗಸೂಳಿ, ಕಾಗವಾಡ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದೆ. ಕಾಗವಾಡದಲ್ಲಿ ಚಕ್‌ಪೊಸ್ಟ್ ಇದ್ದರೂ ಸಹಿತ ತಪಾಸಣೆ ಮಾತ್ರ ಇಲ್ಲ. ಏಕೆಂದರೆ ಇಲ್ಲಿನ ಅಧಿಕಾರಿಗಳಿಗೆ ಏನೂ ತಲುಪಬೇಕು ಅದು ತಲಪುತ್ತಿದೆ ಎನ್ನುತ್ತಾರೆ ರೈತ ಮುಖಂಡ ಮಹಾದೇವ ಮಡಿವಾಳ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅಬ್ಬಿಹಾಳ ಮಾಯಣಟ್ಟಿ, ಶಿವನೂರ, ಸಂಬರಗಿ, ನಾಗನೂರ, ತಂವಶಿ, ಕಲ್ಲೂತಿ, ಶಿರೂರ, ಗ್ರಾಮಗಳಲ್ಲಿ ಹಾದು ಹೋಗುವ ಅಗ್ರಾನಿ ಹಳ್ಳದಲ್ಲಿ ಕಳೆದ 15 ದಿನಗಳಲ್ಲಿ ಈ ಮರಳು ಮಾಫೀಯಾ ನಡೆಯುತ್ತಲೆ ಇದೆ. ಇದು ಹೀಗೆ ಮುಂದುವರೆದರೆ ಜಲಗಂಡಾಂತರ ತರುವುದರಲ್ಲಿ ಅನುಮಾನವೇ ಇಲ್ಲ. ಹಳ್ಳಕೊಳ್ಳಗಳನ್ನು ಈ ರೀತಿಯಾಗಿ ಬಗೆದಿದ್ದೇ ಆದರೆ, ಅದು ಮುಂದೊಂದು ದಿನ ಅಂತರ್ಜಲ ಕುಸಿತಕ್ಕೆ ಕಾರಣವಾಗುತ್ತದೆ. ಹಳ್ಳಗಳಲ್ಲಿ ಮರಳು ಇಲ್ಲದೆ ನೀರು ಸಂಗ್ರಹ ಸಾಮರ್ಥ್ಯವೇ ಕುಸಿಯುತ್ತದೆ. ಇದು ಅಕ್ಕಪಕ್ಕದಲ್ಲಿ ನೀರಿನ ಮಟ್ಟವನ್ನು ತಗ್ಗಿಸುತ್ತದೆ. ಒಂದು ವೇಳೆ ಮರಳು ಮಾಫೀಯಾ ಮುಂದುವರೆದರೆ ಈ ಭಾಗದ ರೈತರಿಗೆ ತೊಂದರೆಯಾಗುತ್ತದೆ. ಈ ಮರಳು ಮಾಫಿಯಾವನ್ನು ಸ್ಥಳೀಯ ಅಧಿಕಾರಿಗಳು ತಡೆಯಬೇಕಿದೆ. ಆದರೆ ಇದರಲ್ಲಿ ಅಧಿಕಾರಿಗಳು ಶಾಮಿಲಾಗಿದ್ದಾರೆ. ಅದಕ್ಕಾಗಿ ಸರ್ಕಾರ ಆದಷ್ಟು ಬೇಗ ಶಾಮೀಲಾದ ಅಧಿಕಾರಿಗಳ ವಿರುದ್ದ ತನಿಖೆ ಕೈಗೊಂಡು ಈ ಮರಳಿ ಮಾಫಿಯಾ ಬಂದ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಮಹಾರಾಷ್ಟ್ರದ ಗಡಿಯಲ್ಲಿ ರಾಜಾರೋಷವಾಗಿ ಮರಳು ಮಾಫಿಯಾ ನಡೆಯುತ್ತಿದ್ದರು ಅಧಿಕಾರಿಗಳು ಮೌನ ವಹಿಸಿದ್ದು ಹಲವಾರು ಸಂಶಯಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮರಳು ಮಾಫಿಯಾವನ್ನು ತಡೆಗಟ್ಟಲು ಮುಂದಾಗಬೇಕಿದೆ. ಮರಳು ಮಾಫೀಯಾದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕಿದೆ