ಉ.ಕ ಸುದ್ದಿಜಾಲ ಬೆಳಗಾವಿ :
ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ಬೆನ್ನಲ್ಲೇ ರಮೇಶ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕ್ರಮದ ಚರ್ಚೆ ನಡೆದಿತ್ತು ಹೈಕಮಾಂಡ್‌ಗೆ ಉತ್ತರ ಕೊಟ್ಟಾಗಲೇ ನಮಗೆ ಈ ಬಗ್ಗೆ ವಾಸನೆ ಬಡೆದಿತ್ತು ಎಂದ ಗೋಕಾಕ ಶಾಸಕ ರಮೇಶ ಜಾರಕಿಹೋಳಿ.
ರಾಜ್ಯದ ಜನರ ಭಾವನೆ ತಿಳಿದು ಇಂದು ಉತ್ತರಿಸುತ್ತಿರುವೆ. ಬಸನಗೌಡ ಪಾಟೀಲ ಯತ್ನಾಳ ನಮ್ಮ ಪಕ್ಷದ, ಸಮುದಾಯದ ನಾಯಕ ಪಕ್ಷದ ನಿರ್ಧಾರ ಪ್ರಶ್ನಿಸುವ ದೊಡ್ಡ ವ್ಯಕ್ತಿ ನಾನಲ್ಲ ನಾಳೆ ಯತ್ನಾಳ ಬೆಂಗಳೂರಿಗೆ ಬರ್ತಾರೆ, ನಾವೆಲ್ಲರೂ ಸೇರಿ ಚರ್ಚೆ ಮಾಡ್ತಿವಿ
ಯತ್ನಾಳ ಕ್ರಮದ ಬಗ್ಗೆ ಪುನರ್ ಪರಿಶೀಲನೆ ಮಾಡುವಂತೆ ಪತ್ರದ ಮುಖೇನ ಮನವಿ ಮಾಡ್ತಿವಿ. ದೊಡ್ಡ ಸಮುದಾಯದ ನಾಯಕನ ವಿರುದ್ಧ ಕ್ರಮ ಕೈಗೊಳ್ಳಬಾರದಿತ್ತು. ನಮ್ಮ ಪಕ್ಷದ ನಾಯಕರು ಯತ್ನಾಳರನ್ನು ಬಳಸಿಕೊಳ್ಳಬೇಕಿತ್ತು ನಾನು ಕೂಡ ವೇದಿಕೆ ಮೇಲೆ ಪಕ್ಷದ ನಾಯಕರ ವಿರುದ್ಧ ಮಾತನಾಡಿದ್ದೇನೆ ಎಂದ ರಮೇಶ ಜಾರಕಿಹೋಳಿ.
ಸೋಮಶೇಖರಂಥ ಕೆಲವರ ಮೇಲೆ ಪಕ್ಷದ ನಾಯಕರಿಗೆ ಪ್ರೀತಿ ಇದೆ, ಅದಕ್ಕೆ ಕ್ರಮ ಕೈಗೊಂಡಿಲ್ಲ. ನಾವೆಲ್ಲರೂ ಬಿಜೆಪಿಯಲ್ಲೇ ಇರ್ತಿವಿ.. ಮುಂದಿನ ಸಲ ನಮ್ಮದೇ ಸರ್ಕಾರ ಬರುತ್ತದೆ. ಸೂರ್ಯ, ಚಂದ್ರನಿಗೂ ಗೃಹಣ ಹಿಡಿಯುತ್ತೆ.. ನಮ್ಮಂಥವರಿಗೆ ಕೆಲ ಸಮಸ್ಯೆ ಆಗಿವೆ ಎಂದರು.
ನಾವೆಲ್ಲರೂ ಗಟ್ಟಿ ಇದ್ದೇವೆ, ಯತ್ನಾಳ ಜೊತೆಗೆ ನಾವಿದ್ದೇವೆ ಯತ್ನಾಳ ಒಂಟಿ ಅಲ್ಲ ಎಂದ ರಮೇಶ ಹೈಕಾಂಡ್‌ನ ಟಾಪ್ 10 ನಾಯಕರ ಜೊತೆಗೆ ನಿನ್ನೆ ನಾನು ಮಾತನಾಡಿದ್ದೇವೆ ಕೆಟ್ಟ ಘಳಿಗೆ, ಉಚ್ಚಾಟನೆ ರದ್ದುಪಡಿಸಲು ನಾವು ಹೈಕಮಾಂಡ್ ಗಮನ ಸೆಳೆಯುತ್ತೇವೆ.
ನಾಳೆ ಕುಮಾರ ಬಂಗಾರಪ್ಪ ಮನೆಯಲ್ಲಿ ರೆಬಲ್ ನಾಯಕರು ಸಭೆ ಮಾಡ್ತಿವಿ ಬಿಜೆಪಿ ನಮಗೆ ತಾಯಿ ಸಮಾನ, ತಪ್ಪಾದರೂ ಹೈಕಮಾಂಡ್ ಜೊತೆಗೆ ಮಾತನಾಡುತ್ತೇವೆ. ರಾಷ್ಟ್ರೀಯ ಮಟ್ಟದ ನಾಯಕರ ಮೇಲೆ ನಮಗೆ ವಿಶ್ವಾಸ ಇದೆ. ವಿಜಯೇಂದ್ರ ಬಗ್ಗೆ ನಾನು ಇಂದು ಮಾತನಾಡಲ್ಲ, ಹಿಂದಿನ ಮಾತಿಗೆ ನಾನು ಬದ್ಧನಿದ್ದೇನೆ
ಯತ್ನಾಳ ವಿರುದ್ಧ ಕ್ರಮದ ನಿರೀಕ್ಷೆ ಇದೆ, ವಿರೋಧಿ ಬಣಕ್ಕೂ ಎಚ್ಚರಿಕೆ ನೀಡಲಾಗಿದೆ ಯತ್ನಾಳ ಮರಳಿ ಬಿಜೆಪಿಗೆ ಸೇರುತ್ತಾರೆಂಬ ವಿಶ್ವಾಸ ನನಗಿದೆ ಎಂದ ರಮೇಶ ಜಾರಕಿಹೋಳಿ.
ಕಳೆದ ಒಂದು ತಿಂಗಳ ಹಿಂದೆ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕ್ರಮದ ಚರ್ಚೆ ನಡೆದಿತ್ತು – ರಮೇಶ ಜಾರಕಿಹೋಳಿ
