ಉ.ಕ ಸುದ್ದಿಜಾಲ ಹುಬ್ಬಳ್ಳಿ :

ಜನಿವಾರ ಧಾರಣೆಯಿಂದ ಸಿಇಟಿ ಪರೀಕ್ಷೆ ಬರೆಯಲು ಬಿಡದ ಹಿನ್ನೆಲೆ ಸಾಮಾಜಿಕ ಜಾಲತಾಣದ ಮೂಲಕ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಪ್ರಲ್ಹಾದ ಜೋಶಿ

ಜನಿವಾರ ಧಾರಣೆ ಹಿಂದು ಧರ್ಮದ ಸಂಪ್ರದಾಯ
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಸೇರಿದಂತೆ ಕೋಟ್ಯಾಂತರ ಜನ ಜನಿವಾರ ಧಾರಣೆ ಮಾಡ್ತಾರೆ ಲಿಂಗಾಯತ ಸಮುದಾಯ ಲಿಂಗಧಾರಣೆ ಪಾಲಿಸುತ್ತೆ ಇದರಿಂದ ಯಾವ ಪರೀಕ್ಷೆಗೆ ಏನು ತೊಂದರೆಯಾಗುತ್ತದೆ?

ಪ್ರತಿ ಬಾರಿಯೂ ಪ್ರತಿ ಪರೀಕ್ಷೆಯಲ್ಲಿ ಹಿಂದು ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಇಂತಹ ಅಸಹಿಷ್ಣುತೆ ಮಿತಿ ಮೀರುತ್ತಿರುವುದು ನಿಲ್ಲಬೇಕಿದೆ ಈ ಘಟನೆಗೆ ಕಾರಣರಾದ ಪ್ರತಿಯೊಬ್ಬನಿಗೂ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ ಜೋಶಿ