ಕಲಬುರಗಿ :

ಪೊಲೀಸ್ ಕಾನಸ್ಟೇಬಲ್ ಶವವಾಗಿ ಪತ್ತೆಯಾಗಿರುವ ಘಟನೆಯೊಂದು ಕಲಬುರಗಿ ತಾಲೂಕಿನ ಸಾವಳಗಿ ಬಳಿ ಇರುವ ರೈಲು ಹಳಿ ಮೇಲೆ ಪತ್ತೆಯಾಗಿದೆ.

ಮದುವೆ ಆಮಂತ್ರಣ ಪತ್ರಿಕೆ

ಅಫಜಲಪುರ ತಾಲ್ಲೂಕಿನ ಮದರಾ (ಕೆ) ಗ್ರಾಮದ ನಿವಾಸಿ‌ ಶ್ರೀನಾಥ್ (25) ಶವವಾಗಿ ಪತ್ತೆಯಾದ ಕಾನಸ್ಟೇಬಲ್, ಇತ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾನ್ಸ್‌ಟೇಬಲ್. ಇಂದು ಮುಂಜಾನೆ ರೈಲು ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ. ಶ್ರೀನಾಥ್ ಮದುವೆಗೆ ನಾಲ್ಕು ದಿನ ಬಾಕಿ ಇತ್ತು. ಡಿಸೆಂಬರ್ ಒಂದರಂದು ಕಲಬುರಗಿ ನಗರದಲ್ಲಿ ವಿವಾಹ ನಿಶ್ಚಯವಾಗಿತ್ತು. ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ‌.