ಬಾಗಲಕೋಟ :

ಜೆಸಿಬಿ ಹಿಂಬದಿಗೆ ಬೈಕ್ ಸವಾರ ಹೊಡೆದ ಪರಿಣಾಮ ಬೈಕ ಸವಾರ ಸಾವನಪ್ಪಿರುವ ಘಟನೆ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಬಳಿ ನಡೆದಿದೆ.

ಶಂಕರ ಮಹಾಲಿಂಗಪ್ಪ ಪಾಟೀಲ (32) ಸಾವನಪ್ಪಿರುವ ಯೋಧ. ಇವರು ತಮ್ಮ ಪತ್ನಿ ಮನೆಗೆ ಹೋಗಿ ಮರಳಿ  ಲೋಕಾಪೂರದಿಂದ ಬರುವಾಗ ಅಫಘಾತವಾಗಿದೆ. ಇವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬೆಳ್ಳಿಗೇರೆ ಗ್ರಾಮದವರಾಗಿದ್ದು,  ಕಳೆದ 12 ದಿನಗಳ ಹಿಂದೆ ರಜೆಗೆ ಬಂದಿದ್ದರು. ಯೋಧ ಶಂಕರ ಅವರ ಪಾರ್ಥಿವ ಶರೀರ ಸಾಯಂಕಾಲ ಸ್ವಗ್ರಾಮ ಬೆಳ್ಳಿಗೆರೆಗೆ ಆಗಮಿಸಲಿದೆ. ಸಾಯಂಕಾಲ ಅಂತಿಮ ಸಂಸ್ಕಾರ ಸ್ವಗ್ರಾಮದಲ್ಲಿ ನಡೆಯಲಿದೆ. ಯೋಧನ ಸಾವಿನಿಂದ ಮುಗಿಲು‌ಮುಟ್ಟಿದ ಕುಟುಂಬಸ್ಥರ ಆಕ್ರಂದನ.