ಉ.ಕ ಸುದ್ದಿಜಾಲ ಚಿಕ್ಕೋಡಿ :

ಜೊಲ್ಲೆ ಗ್ರೂಪ್ ಹಾಗೂ ಸಂಸದ ಕ್ರೀಡಾಮಹೊತ್ಸವ ಅಂಗವಾಗಿ ಹಮ್ಮಿಕೊಂಡ ರಾಷ್ಟ್ರ ಮಟ್ಡದ ಬಡಿಗೆ ಬಾರಕೋಲ ರಹಿತ ಎತ್ತಿನ ಮತ್ತು ಕುದುರೆ ಗಾಡಿ ಶರ್ಯತ್ತು ಜನಮನ ಸೆಳೆದವು.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ – ಮಲಿಕವಾಡ ಶರ್ಯತ್ತು ಮೈದಾನದಲ್ಲಿ ನಡೆದ ಗಾಡಿ ಸ್ಪರ್ಧೆ ಲಕ್ಷಾಂತರ ಕ್ರೀಡಾಪ್ರೇಮಿಗಳನ್ನು ರಂಜಿಸಿದವು. ಸ್ಪರ್ಧೆಯ ಒಟ್ಟು 38 ಲಕ್ಷ ರೂ. ಬಹುಮಾನ ರೈತರು ಪಡೆದುಕೊಂಡರು.

ಸ್ಪರ್ಧೆಯ ಫಲಿತಾಂಶ : ಎತ್ತಿನ ಗಾಡಿ ಸಾಮಾನ್ಯ ವಿಭಾಗದಲ್ಲಿ

ಪ್ರಥಮ ಸ್ಥಾನ : ಕೊಲ್ಲಾಪೂರದ ಧಾನೋಳಿಯ ಭಂಡಾ ಖಿಲಾರೆ ಎತ್ತುಗಳು ಪ್ರಥಮ ಸ್ಥಾನ ಪಡೆದು 11 ಲಕ್ಷ ರೂ ಬಹುಮಾನ ಪಡೆದರು.

ದ್ವಿತೀಯ ಸ್ಥಾನ : ಬಾಳು ಹಜಾರೆ ಶಿರೂರ ದ್ವಿತೀಯ ಗಳಿಸಿ 5 ಲಕ್ಷ ರೂ. ಬಹುಮಾನ ಪಡೆದರು.

ಮೂರನೇ ಸ್ಥಾನ : ಲಗಮಣ್ಣಾ 50 ಸಾವಿರ ರೂ. ಬಹುಮಾನ ಪಡೆದರು.

ನಾಲ್ಕನೇ ಸ್ಥಾನ : ಕುರಂದವಾಡದ ರಮೇಶ ಪಾಟೀಲ 25 ಸಾವಿರ ರೂ. ಬಹುಮಾನ ಪಡೆದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಲೋಕಸಭೆ ಮತ ಕ್ಷೇತ್ರದ ಪ್ರತಿಯೊಂದು ವಿಧಾನಸಭೆ ಮತ ಕ್ಷೇತ್ರದಲ್ಲಿ ಬೇರೆ ಬೇರೆ ಪ್ರತ್ಯೇಕ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಗ್ರಾಮೀಣ ರೈತರ ಮನೋಭಾವ ಹೆಚ್ಚಿಸಲು ಗಾಡಿ ಶರ್ಯತ್ತು ಆಯೋಜನೆ ಸಹಕಾರ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು.

ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಸಂಸದರ ಸಾಂಸ್ಕೃತಿಕ ಕ್ರೀಡಾ ಮಹೋತ್ಸವದ ಅಂಗವಾಗಿ ಲೋಕಸಭೆ ಕ್ಷೇತ್ರದಲ್ಲಿ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿ ಯುವಕ-ಯುವತಿಯರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಜೊಲ್ಲೆ ಗ್ರೂಪ್ ವತಿಯಿಂದ ಅನೇಕ ಸೇವೆ ಮಾಡಲಾಗಿದೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಂಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.

ರೈತರು ಈ ದೇಶದ ಬೆನ್ನೆಲುಬು. ರೈತರಿಗೆ ಪ್ರೋತ್ಸಾಹ ನೀಡಲು ಗಾಡಿ ಶರ್ಯತ್ತು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಮಹಾರಾಷ್ಟ್ರ ಎರಡು ರಾಜ್ಯದ ಕ್ರೀಡಾಪ್ರೇಮಿಗಳಿಗೆ ಈ ಶರ್ಯತ್ತು ಆಯೋಜನೆ ಮಾಡಲಾಗಿದೆ ಎಂದರು.