ಉ.ಕ ಸುದ್ದಿಜಾಲ ಹುಕ್ಕೇರಿ :
ರಾಜ್ಯದಲ್ಲಿ ಯಾವುದೇ ಸಿಎಂ ಕೂಗು ಕೇಳುವ ಪ್ರಶ್ನೆ ಇಲ್ಲ. ಈಗಾಗಲೇ ಸಿಎಂ ಇದ್ದಾರೆ ಅವರನ್ನ ಇಳಿಸುವವರು ಯಾರು? ಪದೇ ಪದೇ ಸಿಎಂ ವಿಚಾರ ಚರ್ಚೆ ಮಾಡುವ ಅವಶ್ಯಕತೆಯಿಲ್ಲ ಎಂದ ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಹೇಳಿದ್ದಾರೆ..
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸತೀಶ ಜಾರಕಿಹೋಳಿ ಹೇಳಿಕೆ ನೀಡಿದ್ದು, ಸರಕಾರದ ಮುಂದೆ ಸಾಕಷ್ಟು ಸಮಸ್ಯೆಗಳಿವೆ ಬಗ್ಗೆ ಹರಿಸಲು ಸಮಯ ಬೇಕಿದೆ. ಸಿಎಂ ಅವರೇ ಇದ್ದಾರೆ ಸರಕಾರ ಮುಂದುವರೆಯುತ್ತೆ ಕೋರ್ಟ ಅನುಮತಿ ನೀಡಿದರೆ ಸಿಎಂ ಮುಂದಿನ ನಿರ್ಧಾರದ ಬಗ್ಗೆ ಚರ್ಚೆಯಾಗಿಲ್ಲ
ದೇಶದಲ್ಲಿ ಬಹಳಷ್ಟು ಜನರ ಮೇಲೆ ಪ್ರಕರಣಗಳು ಇದ್ದರೂ ಸಿಎಂ, ಸಚಿವರು ಇದ್ದಾರೆ. ಕೋರ್ಟ ಅನುಮತಿ ನೀಡಿದರೂ ರಾಜೀನಾಮೆ ನೀಡಬೇಕೆಂದು ಕಾನೂನಿನಲ್ಲಿ ಹೇಳಿಲ್ಲ.
ರಾಹುಲ ಗಾಂಧಿ ಅವರ ಭೇಟಿಗೆ ಬೇರೆ ಕೆಲಸಕ್ಕೆ ಹೋಗಿದ್ದೆ. ಸಿಎಂ ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ. ಸಿಎಂ ಬದಲಾವಣೆ ಬಗ್ಗೆ ಕೇಳಬೇಡಿ ಪ್ಲೀಸ್ ಪ್ಲೀಸ್ ಎಂದು ಮನವಿ ಮಾಡಿದ ಸಚಿವ ಸತೀಶ ಜಾರಕಿಹೋಳಿ
ಜನ ನಮ್ಮನ್ನ ನೋಡಿ ಉಗಳುತ್ತಾರೆ ಬರೇ ಬರೇ ಸಿಎಂ ಎಂದರೇ ಇವರಗೇನೂ ಕೆಲಸ ಇಲ್ಲ ಎಂದು ಜನ ಉಗಿಯುತ್ತಾರೆ ಪದೇ ಪದೇ ಈ ವಿಚಾರ ಕೇಳಬೇಡಿ ಸತೀಶ ಜಾರಕಿಹೊಳಿ ಸಿಎಂ ಆಗಬೇಕು ಎನ್ನುವ ಅಭಿಯಾನ ನಾವು ಆರಂಭಿಸಿಲ್ಲ.
ಎಂಎಲ್‌ಸಿ ಸಿ.ಟಿ ರವಿ ಹೇಳಿಕೆಗೆ ಟಾಂಗ್ ಕೊಟ್ಟ ಸಚಿವ ಸತೀಶ್ ಜಾರಕಿಹೊಳಿ. ದೀಪಾವಳಿ ಹಬ್ಬದೊಳಗೆ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ ಎಂಬ ವಿಚಾರಕ್ಕೆ ಟಾಂಗ್. ಹುಕ್ಕೇರಿಯಲ್ಲಿ ಸಿ.ಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ.
ಸಿ.ಟಿ. ರವಿ ಹೇಳಿದ್ರೆ ನಮ್ಮ ಸರ್ಕಾರ ಬಿದ್ದು ಬಿಡುತ್ತಾ..? ಅವರು ಹೇಳಿರೋದನ್ನ ತಗೊಂಡು ನಾನೇನು ಮಾಡ್ಲಿ. ದಿನಾಲೂ ನೂರು ಜನ ನೂರು ತರಹ ಸ್ಟೇಟ್‌ಮೆಂಟ್ ಕೊಡ್ತಾರೆ. ರವಿ ಹೇಳಿದ್ನೋ ಅಥವಾ ಮತ್ಯಾರೋ ಹೇಳಿದ್ರೂ ಅನ್ನೊದನ್ನ ತಗೊಂಡು ನಾನೇನು ಮಾಡ್ಲಿ..!
ಅಲ್ಲಿ ಹೇಳಿದನ್ನು ಇಲ್ಲಿ ಕೇಳ್ತಿರಿ. ಇಲ್ಲಿ ಹೇಳಿದ್ದನ್ನ ಅಲ್ಲಿ ಕೇಳ್ತಿರಿ. ನಮ್ಮ ಸಂಕಟ ಯಾರಿಗೆ ಹೇಳೋಣ. ಅದು ನಮಗೆ ಸಂಬಂಧಪಟ್ಟದ್ದಲ್ಲ. ಒಬ್ಬರು ಹೇಳಿದ್ರೆ ಸರ್ಕಾರ ಬೀಳುತ್ತಾ..?
ಪ್ಲೀಸ್, ಪ್ಲೀಸ್, ಅದನ್ನೊಂದು ಬಿಟ್ಟು ಬೇರೆ ಡೆವಲ್ಪ್‌ಮೆಂಟ್ ಬಗ್ಗೆ ಕೇಳಿ ಎಂದು ಮಾಧ್ಯಮದವರಿಗೆ ಮನವಿ ಮಾಡಿಕೊಂಡ ಸತೀಶ್ ಜಾರಕಿಹೊಳಿ.