ಉ.ಕ ಸುದ್ದಿಜಾಲ ಬಾಗಲಕೋಟೆ :

ಸೋಲ್ಲಾಪೂರದಲ್ಲಿ ಕರ್ನಾಟಕ ಸಾರಿಗೆ ಬಸ್ ಗೆ ಕೇಸರಿ ಬಣ್ಣ ಬಳಿದ ವಿಚಾರ. ಕೆಎಸ್ಆರ್ಟಿಸಿ ಬಸ್ ಚಾಲಕ ಲಕ್ಷ್ಮಣ ಚಳಿಗೇರಿ ಹೇಳಿಕೆ. ಬಾಗಲಕೋಟೆ ಜಿಲ್ಲೆಯ ಇಲಕಲ್ ಡಿಪೋದ ಲಕ್ಷ್ಮಣ ಚಳಿಗೇರಿ ಅವರು ಬೆಳಿಗ್ಗೆ ಬಾಗಲಕೋಟೆ ಜಿಲ್ಲೆಯ ಇಳಕಲ್ ದಿಂದ ಸೋಲ್ಲಾಪೂರಕ್ಕೆ ತೆರಳಿದ್ದೆವು. ವಾಪಸ್ಸ ಇಲಕಲ್ ಗೆ ಬರೋವಾಗ ಏಕಾಏಕಿ ಕೆಲವರು ತಡೆದರು.

ಸೋಲ್ಲಾಪೂರದಲ್ಲಿ ಕರ್ನಾಟಕ ಸಾರಿಗೆ ಬಸ್ ಗೆ ಕೇಸರಿ ಬಣ್ಣ – ಕೆಎಸ್ಆರ್ಟಿಸಿ ಬಸ್ ಚಾಲಕ ಲಕ್ಷ್ಮಣ ಚಳಿಗೇರಿ ಏನ ಹೇಳತ್ತಾರೆ ಕೇಳಿ

ಡೋರ್ ತೆಗೆದು ಕೆಳಗಿಳಿಸಿದ್ರು. ಅವರು ಮರಾಠಿಯಲ್ಲಿ ಮಾತನಾಡಿದ್ರು, ನನಗೆ ತಿಳಿಯಲಿಲ್ಲ. ನನಗೆ ಹಾರ ಹಾಕಿ ಜೈ ಮಹಾರಾಷ್ಟ್ರ ಹೇಳುವಂತೆ ಹೇಳಿದ್ರು. ಸರ್, ನನಗೆ ಅನ್ನೋಕೆ ಬರೋದಿಲ್ಲ ಅಂದೆ. ಬಳಿಕ ಜೈ ಕರ್ನಾಟಕ ಹೇಳಿ ಜೈ ಮಹಾರಾಷ್ಟ್ರ ಅನ್ನುವಂತೆ ಹೇಳಿದ್ರು.

ಸ್ವಲ್ಪ ಕಿರಿಕಿರಿ ಮಾಡಿ ನಂತ್ರ ಬಿಡಿಸಿ ಕಳಿಸಿದ್ರು. ಅವರೆಲ್ಲಾ ಕೈಯಲ್ಲಿ ಏನೇನು ಹಿಡಿದಿದ್ರು.. ಆ ಭಯದಿಂದ ಜೈ ಮಹಾರಾಷ್ಟ್ರ ಅಂತ ಹೇಳಿದೆ. ಬಸ್ ನಲ್ಲಿದ್ದವರೂ ಸಹ ಏನು ಅಂತ ಕೇಳಲಿಲ್ಲ…ಅದು ಬಹಳ ಬೇಜಾರಾಯ್ತು.

ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣದಲ್ಲಿ ಚಾಲಕ ಲಕ್ಷಣ ಚಳಗೇರಿ ಹೇಳಿಕೆ. ಸಂಜೆ 6 ಗಂಟೆಗೆ ಇಲಕಲ್ ಡಿಪೋಗೆ ಬಂದು ತಲುಪಿದ ಬಸ್. ಮಧ್ಯಾಹ್ನ 12 ಗಂಟೆ ಸೋಲ್ಲಾಪೂರ ಬಿಟ್ಟಿದ್ದ ಬಸ್. ಮದ್ಯದಲ್ಲಿ ಅಡ್ಡಗಟ್ಟಿದ್ದ ಮರಾಠಿ ಪುಂಡರು.

ಬಸ್ ನಿಲ್ಲಿಸಿ ಗ್ಲಾಸ್ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದಿದ್ದ ಪುಂಡರು. ಅಸಹಾಯಕನಾಗಿ ಜೈ ಮಹಾರಾಷ್ಟ್ರ ಎಂಬ ಹೇಳಿಕೆ ನೀಡಿ ಮರಳಿ ಬಂದಿರೋ ಲಕ್ಷ್ಮಣ ಚಳಿಗೇರಿ.