ಉ.ಕ ಸುದ್ದಿಜಾಲ ಚಿಕ್ಕೋಡಿ :

ಹಲವಾರು ದಶಕಗಳ ಕೂಗು ಇನ್ನೂ ಮರೆಚಿಕೆಯಾಗಿದೆ ನೂತನ ಸಂಸದರು ನಮ್ಮ ಬೇಡಿಕೆ ಇಡೇರಿಸಲೇಬೇಕೆಂದು ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ವೇಗ ಕೊಡಬೇಕೆಂದು ಒತ್ತಾಯಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯು ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಮಹಾರಾಷ್ಟ್ರದ ಕರಾಡ – ನಿಪ್ಪಾಣಿ – ಬೆಳಗಾವಿ ಮತ್ತು ಶೇಡಬಾಳ – ಅಥಣಿ – ವಿಜಯಪೂರ ಹೀಗೆ ರೈಲು ಯೋಜನೆಗಳು 2010 – 2011 ರಲ್ಲಿ ಸಮೀಕ್ಷೆಯಾಗಿ ಅನುಮೋದನೆ ಸಹ ಯುಪಿಎ ಸರಕಾರದಲ್ಲಿ ದೊರಕಿದೆ,

ಆದರೆ ದಶಕಗಳು ಕರೆದರೂ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಇನ್ನೂ ಕಾಮಗಾರಿ ಆರಂಭವಾಗಿಲ್ಲ ಮತ್ತು ಕುಡಚಿ – ಬಾಗಲಕೋಟ ರೈಲು ಮಾರ್ಗದ ಕಾಮಗಾರಿ ದಶಕಗಳಿಂದ ಆಮೆ ಗತಿಯಲ್ಲಿ ಸಾಗುತ್ತಲಿದೆ, ಈ ಕುರಿತು ಸಾಕಷ್ಟು ಸಲ ಈ ಭಾಗದ ಜನರು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ರಾಜಕಾರಣಗಳ ಆಸಕ್ತಿಯ ಕೊರತೆಯಿಂದ ಈ ಭಾಗದ ಬಹು ದಿನಗಳ ಬೇಡಿಕೆಯಾದ ಈ ರೈಲು ಯೋಜನೆಗಳು ಕರಾಡ – ನಿಪ್ಪಾಣ – ಬೆಳಗಾವಿ ಮತ್ತು ಶೇಡಬಾಳ – ಅಥಣಿ – ವಿಜಯಪೂರ ಕಾಮಗಾರಿ ಆರಂಭವಾಗಿಲ್ಲ,

ಹಾಗಾಗಿ ತಮ್ಮ ಅಧಿಕಾರ ಅವಧಿಯಲ್ಲಿ ಈ ಭಾಗದ ರೈಲ ಯೋಜನೆಗಳನ್ನು ಆರಂಭಿಸಿ ಪೂರ್ಣಗೊಳಿಸಬೇಕು ಹಾಗೂ ಕುಡಚಿ – ಬಾಗಲಕೋಟ ಕಾಮಗಾರಿ ಸಹ ಪೂರ್ಣವಾಗಬೇಕು ಎಂದು ಒತ್ತಾಯಿಸಿದರು.

ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಹೋರಾಟ ಸಮಿತಿ ಸದಸ್ಯರು ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೊಳಿಗೆ ಮನವಿ ಸಲ್ಲಿಸಿದ್ದಾರೆ.